ತಡವಾಗಿ ಬರುತ್ತಿದ್ದ ನೌಕರರಿಗೆ ಕಸಗುಡಿಸುವ ಶಿಕ್ಷೆ

ವಿಜಯಪುರ: ಕಚೇರಿಗೆ ತಡವಾಗಿ ಬರುತ್ತಿದ್ದ ಸಿಬ್ಬಂದಿಗೆ ಕಚೇರಿ ಆವರಣದ ಕಸಗುಡಿಸುವ ಶಿಕ್ಷೆ ನೀಡಲಾಗಿದೆ. ಬಸವನಬಾಗೇವಾಡಿಯ ತಹಶೀಲ್ದಾರ್ ಕಚೇರಿಯಲ್ಲಿ ಸಿಬ್ಬಂದಿ ತಡವಾಗಿ ಕಚೇರಿಗೆ ಬರುತ್ತಿದ್ದರು. ಪದೇಪದೇ ಸೂಚನೆ ನೀಡಿದರೂ ತಡವಾಗಿ ಬಂದ ಹಿನ್ನಲೆಯಲ್ಲಿ ಈ ರೀತಿ ಶಿಕ್ಷೆ ನೀಡಲಾಗಿದೆ.

ಕಚೇರಿಗೆ ಬೇಗ ಬರುವಂತೆ ಐದಾರು ತಿಂಗಳಿನಿಂದ ಹೇಳಿದರೂ ನಾಲ್ಕೈದು ಜನ ನಿರ್ಲಕ್ಷ ತೋರಿ ತಡವಾಗಿ ಕಚೇರಿಗೆ ಬರುತ್ತಿದ್ದರು. ಸೋಮವಾರವೂ ತಡವಾಗಿ ಬಂದ ಸಿಬ್ಬಂದಿಗೆ ಕಚೇರಿ ಆಭರಣ ಸ್ವಚ್ಛಗೊಳಿಸುವಂತೆ ತಹಶೀಲ್ದಾರ್ ದುಂಡಪ್ಪ ಕೋಮಾರ ಸೂಚನೆ ನೀಡಿದ್ದಾರೆ.

ಕೆಲವು ಸಿಬ್ಬಂದಿ ಕಚೇರಿಗೆ ತಡವಾಗಿ ಬರುವುದನ್ನು ಬಿಟ್ಟಿರಲಿಲ್ಲ. ಹೀಗಾಗಿ ಕಚೇರಿ ಹೊರ ಆವರಣ ಸ್ವಚ್ಛ ಮಾಡಲು ಸೂಚಿಸಲಾಗಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read