ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನೊಳಗೆ ಮೊಬೈಲ್ ಕೊಂಡೊಯ್ದು ಸಿಬ್ಬಂದಿ ಸಿಕ್ಕಿಬಿದ್ದ ಘಟನೆ ನಡೆದಿದೆ.
ಜೈಲಿನೊಳಗೆ ಫೋನ್ ಒಯ್ಯುವಾಗ ಅಮರ್ ಪ್ರಾಂಜೆ ಸಿಕ್ಕಿಬಿದ್ದಿದ್ದಾನೆ ಎಂದು ತಿಳಿದು ಬಂದಿದೆ. 2 ಇಯರ್ ಫೋನ್, ಮೊಬೈಲ್ ನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಬಚ್ಚಿಟ್ಟುಕೊಂಡು ಜೈಲಿನೊಳಗೆ ಕೊಂಡೊಯ್ಯಲಾಗುತ್ತಿತ್ತು.
ಸದ್ಯ ಅಮರ್ ಪ್ರಾಂಜೆಯನ್ನು ಜೈಲಾಧಿಕಾರಿಗಳು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ನಟ ದರ್ಶನ್ ಕೇಸ್ ವಿಚಾರದಲ್ಲಿ ಪರಪ್ಪನ ಅಗ್ರಹಾರ ಜೈಲು ಭಾರಿ ಸುದ್ದಿಯಾಗಿತ್ತು. ಜೈಲಿನೊಳಗೆ ವಿಐಪಿ ಆತಿಥ್ಯ ನೀಡಲಾಗಿತ್ತು. ಈ ವಿಚಾರಕ್ಕೆ ಸುಪ್ರೀಂಕೋರ್ಟ್ ಬಿಸಿ ಮುಟ್ಟಿಸಿತ್ತು . ಇದಾದ ಬಳಿಕ ಪರಪ್ಪನ ಅಗ್ರಹಾರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
