ಬೆಂಗಳೂರು : ಕರ್ನಾಟಕ ‘ಎಸ್ ಎಸ್ ಎಲ್ ಸಿ’ ಫಲಿತಾಂಶ ಪ್ರಕಟವಾಗಿದ್ದು, 22 ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆದಿದ್ದಾರೆ.
ಈ ವರ್ಷದ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ 625 ಕ್ಕೆ 625 ಅಂಕಗಳನ್ನು 22 ವಿದ್ಯಾರ್ಥಿಗಳು ಪಡೆದಿದ್ದಾರೆ. ಹಾಗೆಯೇ 624 ಅಂಕಗಳನ್ನು 65 ವಿದ್ಯಾರ್ಥಿಗಳು, 623 ಅಂಕಗಳನ್ನು 108 ವಿದ್ಯಾರ್ಥಿಗಳು, 622 ಅಂಕಗಳನ್ನು 189 ವಿದ್ಯಾರ್ಥಿಗಳು ಪಡೆದಿದ್ದಾರೆ.
ಈ ಬಾರಿ ಪರೀಕ್ಷೆಗೆ ಹಾಜರಾದ 842173 ವಿದ್ಯಾರ್ಥಿಗಳ ಪೈಕಿ 524984 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಪರೀಕ್ಷೆಗೆ ಹಾಜರಾದ 390311 ಬಾಲಕರ ಪೈಕಿ 226637 ಬಾಲಕರು ಪಾಸಾಗಿದ್ದರೆ, ಪರೀಕ್ಷೆಗೆ ಹಾಜರಾದ 400579 ಬಾಲಕಿಯರ ಪೈಕಿ 296438 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ (ಶೇ.91.12), ಉಡುಪಿ ಜಿಲ್ಲೆ 2ನೇ ಸ್ಥಾನ (ಶೇ.89.96), ಉತ್ತರ ಕನ್ನಡ ಜಿಲ್ಲೆಗೆ 3ನೇ ಸ್ಥಾನ (ಶೇ.83.19), ಶಿವಮೊಗ್ಗ ಜಿಲ್ಲೆಗೆ 4ನೇ ಸ್ಥಾನ (ಶೇ.82.29), ಕೊಡಗು ಜಿಲ್ಲೆಗೆ 5ನೇ ಸ್ಥಾನ (ಶೇ.82.21), ಕಲಬುರಗಿ ಕೊನೆಯ ಸ್ಥಾನ (ಶೇ42.43) ಪಡೆದುಕೊಂಡಿದೆ.