ʻSSLCʼ ಪರೀಕ್ಷೆ- 1 : ಅಂತಿಮ ಪ್ರವೇಶ ಪತ್ರಗಳ ಕುರಿತು ವಿದ್ಯಾರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು : 2024ನೇ ಮಾರ್ಚ್/ಏಪ್ರಿಲ್ ಮಾಹೆಯಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆ- 1ಕ್ಕೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ಅಂತಿಮ ಪ್ರವೇಶ ಪತ್ರಗಳ ವಿತರಣೆ ಕುರಿತು ಶಿಕ್ಷಣ ಇಲಾಖೆ ಮಹತ್ವದ ಸೂಚನೆ ನೀಡಿದೆ.

2024ನೇ ಮಾರ್ಚ್/ಏಪ್ರಿಲ್ ಮಾಹೆಯಲ್ಲಿ ನಡೆಯುವ ಎಸ್.ಎಸ್.ಎಲ್.ಸಿ ಪರೀಕ್ಷೆ-1ಕ್ಕೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ಅಂತಿಮ ಪ್ರವೇಶ ಪತ್ರಗಳನ್ನು ದಿನಾಂಕ: 06.03.2024 ರಂದು ಮಂಡಳಿಯ ಜಾಲತಾಣದ ಶಾಲಾ ಲಾಗಿನ್‌ನಲ್ಲಿ ಅಪ್‌ಲೋಡ್ ಮಾಡಲಾಗುವುದು. ಶಾಲಾ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ಮಂಡಲಿಯ ಜಾಲತಾಣದ ಶಾಲಾ ಲಾಗಿನ್ ಮೂಲಕ ಡೌನ್ ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ವಿತರಿಸುವಂತೆ ಸೂಚನೆ ನೀಡಲಾಗಿದೆ.

  1. ತಮ್ಮ ಶಾಲೆಯ ಮುಖಾಂತರ ನೋಂದಾಯಿಸಿದ ವಿದ್ಯಾರ್ಥಿಗಳ ಸಂಖ್ಯೆ, ಡೌನ್‌ಲೋಡ್ ಮಾಡಿಕೊಂಡ ಪ್ರವೇಶ ಪತ್ರಗಳ ಸಂಖ್ಯೆಗೆ ಸರಿ ಹೊಂದುತ್ತಿದೆಯೇ ಎಂದು ಪರಿಶೀಲಿಸಿಕೊಳ್ಳುವುದು. ಒಂದು ವೇಳೆ ಯಾವುದಾದರು ವಿದ್ಯಾರ್ಥಿಯ ಪ್ರವೇಶ ಪತ್ರ ಬಂದಿಲ್ಲದಿದ್ದರೆ, ಸದರಿ ವಿದ್ಯಾರ್ಥಿಯ ವಿವರವನ್ನು ಸಮರ್ಥನೆಯೊಂದಿಗೆ / ದಾಖಲೆಗಳೊಂದಿಗೆ ಕೂಡಲೇ ಮಂಡಲಿಗೆ ಕಳುಹಿಸಿಕೊಡುವುದು.
  2. ಒಂದು ವೇಳೆ CCERF ವಿದ್ಯಾರ್ಥಿ CCEPF ಆಗಿದ್ದು, ಅಥವಾ CCEPF ವಿದ್ಯಾರ್ಥಿ CCERF ಆಗಿದ್ದು, ಹೀಗೆ ವಿದ್ಯಾರ್ಥಿಯ ವಿಧ ಬದಲಾಗಿದ್ದಲ್ಲಿ ಅಂತಹ ಪ್ರವೇಶ ಪತ್ರಗಳನ್ನು ಸೂಕ್ತ ದಾಖಲೆಗಳ ಸಮರ್ಥನೆಯೊಂದಿಗೆ ತಿದ್ದುಪಡಿಗಾಗಿ ಮಂಡಲಿಗೆ ಕಳುಹಿಸಿಕೊಡುವುದು.
  3. ಉಲ್ಲೇಖಿತ-1ರ ಅಧಿಸೂಚನೆಯಲ್ಲಿ ವಿವರಿಸಿರುವಂತೆ ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯ/ವಿನಾಯಿತಿ ನೀಡುವ ಸಂಬಂಧ ಉಪನಿರ್ದೇಶಕರ ಜ್ಞಾಪನದನ್ವಯ ದೈಹಿಕ ಸ್ಥಿತಿ, ಭಾಷಾ ವಿನಾಯಿತಿ, ಬದಲಿ ವಿಷಯಗಳ ಮಾಹಿತಿಗಳು ಪ್ರವೇಶ ಪತ್ರದಲ್ಲಿ ಮುದ್ರಿತವಾಗಿರುವ ಬಗ್ಗೆ ಮುಖ್ಯಶಿಕ್ಷಕರು ಖಚಿತಪಡಿಸಿಕೊಳ್ಳುವುದು. ಇಲ್ಲವಾದಲ್ಲಿ ಉಪನಿರ್ದೇಶಕರ [ಆಡಳಿತ]ರವರ ಜ್ಞಾಪನದ ಪ್ರತಿಯನ್ನು ದೃಢೀಕರಿಸಿ ಸಮರ್ಥನೆಯೊಂದಿಗೆ ಸಂಬಂಧಿಸಿದ ಶಾಖಾಧಿಕಾರಿಗಳಿಗೆ ಕಳುಹಿಸಿ ವಿನಾಯಿತಿ ಪಡೆದುಕೊಳ್ಳುವುದು.
  1. ವಿದ್ಯಾರ್ಥಿಯ ಭಾವಚಿತ್ರ, ಸಹಿ ಮತ್ತು ಇತರೆ ತಿದ್ದುಪಡಿಗಳಿದಲ್ಲಿ ಸೂಕ್ತ ದಾಖಲೆಗಳೊಂದಿಗೆ ಮಂಡಲಿಗೆ ಸಲ್ಲಿಸಿ ಸರಿಪಡಿಸಿಕೊಳ್ಳುವುದು. ಒಂದು ವೇಳೆ ಸರಿಪಡಿಸಿಕೊಳ್ಳದೇ ಇದ್ದಲ್ಲಿ ಇದರಿಂದ ವಿದ್ಯಾರ್ಥಿಗೆ ಮುಂದೆ ಅಂಕಪಟ್ಟಿಯಲ್ಲಾಗುವ ತೊಂದರೆಗೆ ಸಂಬಂಧಿಸಿದ ಶಾಲಾ ಮುಖ್ಯಸ್ಥರೇ ಜವಾಬ್ದಾರರಾಗಿದ್ದು, ಮಂಡಲಿಯು ಇದರ ಜವಾಬ್ದಾರಿ ಹೊರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.
  1. ಯಾವುದೇ ವಿದ್ಯಾರ್ಥಿಯ ಭಾವಚಿತ್ರ ಬದಲಾವಣೆಗೆ ಸಂಬಂಧಿಸಿದಂತೆ, ಪರೀಕ್ಷೆಗೆ ಪೂರ್ವದಲ್ಲಿ ಮಾಡಲಾದ ಬದಲಾವಣೆಗಳನ್ನು ಮಾತ್ರ ಮಂಡಲಿಯು ಪರಿಗಣಿಸುತ್ತದೆ. ಪರೀಕ್ಷಾ ನಂತರದಲ್ಲಿ ಬರುವ ವಿದ್ಯಾರ್ಥಿಗಳ ಭಾವಚಿತ್ರ ಬದಲಾವಣೆ ಕುರಿತ ಯಾವುದೇ ಮನವಿಗಳನ್ನು ಮಂಡಲಿ ಪುರಸ್ಕರಿಸುವುದಿಲ್ಲ. ಇದಕ್ಕೆ ಸಂಬಂಧಿಸಿದ ಶಾಲಾ ಮುಖ್ಯಸ್ಥರು ಹಾಗೂ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರುಗಳು ನೇರ ಜವಾಬ್ದಾರರಾಗಿರುತ್ತಾರೆ. ಒಂದು ವೇಳೆ ಇದಕ್ಕೆ ವ್ಯತಿರಿಕ್ತವಾಗಿ ಬದಲಿ ವಿದ್ಯಾರ್ಥಿ ಪರೀಕ್ಷೆ ಬರೆಯಲು ಸಹಕರಿಸಿ ಪರೀಕ್ಷಾ ಅವ್ಯವಹಾರದಲ್ಲಿ ಭಾಗಿಯಾಗಿದಲ್ಲಿ ಸಂಬಂಧಿಸಿದ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರ ಮತ್ತು ಶಾಲಾ ಮುಖ್ಯಸ್ಥರ ಮೇಲೆ ಕೆ.ಸಿ.ಎಸ್ (ಸಿ.ಸಿ.ಎ.) ನಿಯಮ-1957 ಮತ್ತು 1983ರ ಕರ್ನಾಟಕ ಶಿಕ್ಷಣ ಕಾಯ್ದೆ ಹಾಗೂ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಕಾಯ್ದೆ-1966 ರನ್ವಯ ಕ್ರಮ ಜರುಗಿಸಲಾಗುವುದು.
  1. ಒಂದೇ ವಿದ್ಯಾರ್ಥಿಗೆ ಎರಡು ನೋಂದಣಿ ಸಂಖ್ಯೆಯ ಪ್ರವೇಶ ಪತ್ರಗಳು ಬಂದಿದ್ದಲ್ಲಿ ಒಂದನ್ನು ಉಳಿಸಿಕೊಂಡು ಮತ್ತೊಂದನ್ನು ರದ್ದುಪಡಿಸಿ ದೃಢೀಕರಿಸಿ ಸೂಕ್ತ ಷರಾದೊಂದಿಗೆ ಪರಿಶೀಲನಾ ಶಾಖೆಯ ಶಾಖಾಧಿಕಾರಿಗಳ ವಿಳಾಸಕ್ಕೆ ಹಿಂದಿರುಗಿಸುವುದು.
  1. CCERF, CCERR, CCEPF, CCEPR, NSR & NSPR ಕೇಂದ್ರಗಳಲ್ಲಿ ಹಂಚಿಕೆ ಮಾಡಲಾಗಿರುತ್ತದೆ. ಶಾಲಾ ಮುಖ್ಯ ಶಿಕ್ಷಕರು ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಈ ಕುರಿತು ಮಾಹಿತಿಯನ್ನು ನೀಡುವುದು.
  1. ವಿದ್ಯಾರ್ಥಿಗಳ ಅಂತಿಮ ಪ್ರವೇಶ ಪತ್ರಗಳಲ್ಲಿ ವಿದ್ಯಾಥಿಯ ಹೆಸರು, ತಂದೆ ಹೆಸರು, ತಾಯಿ ಹೆಸರು, ಭಾವಚಿತ್ರ, ಸಹಿ, ಇತರೆ ತಿದ್ದುಪಡಿಗಳಿದ್ದಲ್ಲಿ, CCERF ವಿದ್ಯಾರ್ಥಿಗಳಿಗೆ ಎಸ್.ಎ.ಟಿ.ಎಸ್ ನಲ್ಲಿ ತಿದ್ದುಪಡಿ ಮಾಡಿದ ಪ್ರತಿಯೊಂದಿಗೆ ಮತ್ತು ಇತರೆ ದಾಖಲೆಗಳೊಂದಿಗೆ ಪ್ರತಿ ತಿದ್ದುಪಡಿಗೆ ರೂ.100/- ದಂಡ ಶುಲ್ಕ ಹಾಗೂ ಮಾಧ್ಯಮ ಬದಲಾವಣೆ ಇದಲ್ಲಿ ಪ್ರತಿ ತಿದ್ದುಪಡಿಗೆ ಮಂಡಲಿ ನಿಯಮ 1966ರ Annexure-III ರ ನಿಯಮ 24ರಡಿ ರೂ.500/- ದಂಡ ಶುಲ್ಕವನ್ನು ನೆಫ್ಟ್ ಚಲನ್ ಮೂಲಕ ಪಾವತಿಸಿ ದಿನಾಂಕ: 16.03.2024 ರ ಸಂಜೆ 5.00 ಗಂಟೆಯೊಳಗೆ ಮಂಡಳಿಗೆ ತಲುಪುವಂತೆ ಪ್ರಸ್ತಾವನೆಯನ್ನು ಸಲ್ಲಿಸುವುದು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read