‘ಓಂ ಶಾಂತಿ ಓಂ’ ಚಿತ್ರದ ಪ್ರಚಾರ ಕಾರ್ಯತಂತ್ರವನ್ನು ಟಾಯ್ಲೆಟ್ ನಲ್ಲಿ ಕುಳಿತು ಚರ್ಚಿಸಿದ್ದರಂತೆ ಶಾರುಖ್…!

ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಓಂ ಶಾಂತಿ ಓಂ 2007 ರ ಸೂಪರ್ ಡೂಪರ್ ಚಿತ್ರ. ಇಬ್ಬರು ಸ್ನೇಹಿತರಾಗಿ ಕಾಣಿಸಿಕೊಂಡಿದ್ದ ಚಿತ್ರದ ಯಶಸ್ಸಿನ ಭಾಗದಲ್ಲಿ ನಟ ಶಾರುಖ್ ಖಾನ್ ಪಾತ್ರವನ್ನು ನಟ ಶ್ರೇಯಸ್ ತಲ್ಪಾಡೆ ಹಂಚಿಕೊಂಡಿದ್ದಾರೆ.

ಚಿತ್ರಕ್ಕೆ ಪರಿಣಾಮಕಾರಿ ಮಾರ್ಕೆಟಿಂಗ್ ಮಾಡಲು ಉತ್ಸುಕರಾಗಿದ್ದ ಶಾರುಖ್ ಖಾನ್, ಶ್ರೇಯಸ್ ತಲ್ಪಾಡೆ ಜೊತೆ ಲಂಡನ್ ನ ಹೋಟೆಲ್ ಕೋಣೆಯಲ್ಲಿ ಟಾಯ್ಲೆಟ್ ಪಾಟ್ ಮೇಲೆ ಪ್ರಮೋಷನ್ ಬಗ್ಗೆ ವಿವಿಧ ತಂತ್ರಗಳನ್ನು ಚರ್ಚಿಸುತ್ತಿದ್ದರಂತೆ.

ಯೂಟ್ಯೂಬರ್ ಸಿದ್ಧಾರ್ಥ್ ಕಣ್ಣನ್ ಅವರೊಂದಿಗಿನ ಸಂವಾದದಲ್ಲಿ “ಓಂ ಶಾಂತಿ ಓಂ’ 2007 ರ ಅತಿದೊಡ್ಡ ಚಿತ್ರವಾಗಬೇಕೆಂದು ನಾನು ಬಯಸುತ್ತೇನೆ” ಎಂದು ಶಾರುಖ್ ಹೇಳಿದ್ದನ್ನು ಶ್ರೇಯಸ್ ನೆನಪಿಸಿಕೊಂಡಿದ್ದಾರೆ.

“ನಾವು ಲಂಡನ್ ಹೋಟೆಲ್ ಕೋಣೆಯಲ್ಲಿ ಒಟ್ಟಿಗೆ ವಾಶ್ ರೂಮ್‌ನಲ್ಲಿ ಕುಳಿತಿದ್ದೆವು. ದೀಪಿಕಾ ಹೊರಗೆ ಸಂದರ್ಶನ ನೀಡುತ್ತಿದ್ದರು. ಅಂದು ಸಂಜೆ ಪ್ರೀಮಿಯರ್ ಆಯೋಜಿಸಲಾಗಿತ್ತು. ಆಗಲೂ ಶಾರುಖ್ ಹೊಸ ಹೊಸ ಐಡಿಯಾಗಳೊಂದಿಗೆ ಬರುತ್ತಿದ್ದರು. ನೀನು ಮತ್ತು ನಾನು ರೆಡ್ ಕಾರ್ಪೆಟ್ ಮೇಲೆ ನೃತ್ಯ ಮಾಡೋಣ, ಸಾಧ್ಯವಾದಷ್ಟು ಜನರನ್ನು ಆಕರ್ಷಿಸೋಣ’ ಎಂದಿದ್ದರು.

ಅವರು ತಮ್ಮ ಖ್ಯಾತಿಯನ್ನು ಎಂದಿಗೂ ಗ್ರಾಂಟೆಡ್ ಆಗಿ ತೆಗೆದುಕೊಳ್ಳಲಿಲ್ಲ. ಅವರಿಗಿದ್ದ ಖ್ಯಾತಿಗೆ ಖಂಡಿತವಾಗಿ ಜನರೇ ಸಿನಿಮಾ ನೋಡಲು ಬರುತ್ತಿದ್ದರು. ಆದರೆ ಶಾರುಖ್ ಖಾನ್ ಸಾಧ್ಯವಾದಷ್ಟು ಜನರನ್ನು ಆಕರ್ಷಿಸಲು ಕೊನೆಯ ಕ್ಷಣದವರೆಗೂ ಹೋರಾಡಲು ಬಯಸಿದ್ದರು. ಆ ಪ್ರಚಾರಗಳ ಸಮಯದಲ್ಲಿ ಅವರು ಮಾಡಿದ ಎಲ್ಲ ಕಾರ್ಯಗಳು ಅದ್ಭುತವಾಗಿದ್ದವು ಎಂದಿದ್ದಾರೆ.

ಅದಲ್ಲದೆ ಲಂಡನ್‌ನಲ್ಲಿ ‘ಓಂ ಶಾಂತಿ ಓಂ’ ಪ್ರೀಮಿಯರ್‌ನ ಹಿಂದಿನ ರಾತ್ರಿ ಶಾರುಖ್ ರಾತ್ರಿ 11 ಗಂಟೆಗೆ ಶ್ರೇಯಸ್ ಅವರ ಹೋಟೆಲ್ ಕೋಣೆಯ ಬಾಗಿಲು ತಟ್ಟಿ ಅಚ್ಚರಿ ಮೂಡಿಸಿದ್ದರಂತೆ. ಶಾರುಕ್ ರನ್ನು ಕಂಡು ಶ್ರೇಯಸ್ ದಿಗ್ಭ್ರಮೆಗೊಂಡಿದ್ದರಂತೆ. ಈ ವೇಳೆ ಶಾರುಖ್ ಹಾಸ್ಯಮಯವಾಗಿ ನೀವು ನನ್ನನ್ನು ಒಳಗೆ ಆಹ್ವಾನಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದರು. ಒಳಗೆ ಪ್ರವೇಶಿಸಿದ ನಂತರ ಶಾರುಖ್ ಖಾನ್ ನಾಳಿನ ಪ್ರಚಾರ ಕಾರ್ಯಕ್ರಮಗಳನ್ನು ಮುಂದಿಟ್ಟು ಮರುದಿನದ ಯೋಜನೆಯನ್ನು ಸೂಕ್ಷ್ಮವಾಗಿ ವಿವರಿಸಿದರು ಎಂದಿದ್ದಾರೆ.

“ನಾವು ಯಾವಾಗ ಬೆಳಗಿನ ಉಪಾಹಾರ ಸೇವಿಸುತ್ತೇವೆ ಎಂಬುದರಿಂದ ಹಿಡಿದು ನಾವು ಪತ್ರಿಕಾಗೋಷ್ಠಿಗೆ ಹೊರಡುವವರೆಗಿನ ಸಂಪೂರ್ಣ ಚಾರ್ಟ್ ಅನ್ನು ಅವರು ಹೊಂದಿದ್ದರು. ಶಾರುಖ್ ಖಾನ್ ಲಂಡನ್‌ನಲ್ಲಿ ರಾತ್ರಿ 11 ಗಂಟೆಯಲ್ಲಿ ಅದನ್ನೆಲ್ಲಾ ಮಾಡುತ್ತಿದ್ದರು.

“ಆ ವ್ಯಕ್ತಿ ನನಗೆ ಸೂಪರ್‌ಸ್ಟಾರ್ ಎಂದು ಯಾವತ್ತೂ ಅನ್ನಿಸಲಿಲ್ಲ. ನಾವು ತೆರೆಯ ಮೇಲೆ ಸ್ನೇಹಿತರಾಗಿದ್ದೆವು ಮತ್ತು ತೆರೆಯ ಹೊರಗೆ ಒಳ್ಳೆಯ ಗೆಳೆಯರಾಗಿದ್ದೆವು. ಇಂದಿಗೂ ಅವರು ನನ್ನನ್ನು ಭೇಟಿಯಾದರೆ ಅದೇ ತೀವ್ರತೆ ಮತ್ತು ಸ್ನೇಹದಿಂದ ನನ್ನನ್ನು ಭೇಟಿಯಾಗುತ್ತಾರೆ ಎಂದು ಶ್ರೇಯಸ್ ಹೇಳಿದರು.

‘ಓಂ ಶಾಂತಿ ಓಂ’ ನಿಜಕ್ಕೂ 2007 ರ ಅತಿದೊಡ್ಡ ಚಿತ್ರವಾಯಿತು. ವಿಶ್ವದಾದ್ಯಂತ 150 ಕೋಟಿ ರೂ. ಗಳಿಸಿತು. ಫರಾ ಖಾನ್ ನಿರ್ದೇಶಿಸಿದ ಈ ಚಿತ್ರದಲ್ಲಿ ಕಿರಣ್ ಖೇರ್, ಅರ್ಜುನ್ ರಾಂಪಾಲ್ ಮತ್ತು ಬಿಂದು ಸೇರಿದಂತೆ ಇತರರಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read