ಅಹಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಸೋಲು ಕಂಡಿದೆ.
ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದ್ದು, ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತ ತಂದಿದೆ. ಟೂರ್ನಿಯ ಎಲ್ಲಾ ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಿದ ಭಾರತ ತಂಡ ಫೈನಲ್ ನಲ್ಲಿ ಸೋಲು ಕಂಡಿದ್ದು, ಅಭಿಮಾನಿಗಳಿಗೆ ನಿರಾಸೆ ತರಿಸಿದೆ. ಭಾರತ ತಂಡದ ಸೋಲಿಗೆ ಕಾರಣಗಳ ಕುರಿತಾಗಿ ಭಾರಿ ಚರ್ಚೆ ನಡೆದಿದೆ.
ಸೋಲಿಗೆ ಕಾರಣ
ಕಳೆದ 10 ಪಂದ್ಯಗಳಲ್ಲಿ ಯಶಸ್ವಿಯಾಗಿದ್ದ ಅಗ್ರ ಕ್ರಮಾಂಕದ ಆಟಗಾರರು ಫೈನಲ್ ಪಂದ್ಯದಲ್ಲಿ ವಿಫಲರಾದರು.
ವಿಕೆಟ್ ಗಳು ಬಿದ್ದ ಸಂದರ್ಭದಲ್ಲಿ ಒತ್ತಡಕ್ಕೆ ಸಿಲುಕಿ ನಿಧಾನಗತಿಯಲ್ಲಿ ಇನಿಂಗ್ಸ್ ಕಟ್ಟಿದ್ದು
ಆರಂಭದಲ್ಲಿ ತೀಕ್ಷ್ಣವಾದ ಬೌಲರ್ ಗಳು ನಂತರ ಲಯ ಕಳೆದುಕೊಂಡರು
ಬೌಲಿಂಗ್ ಗೆ ನೆರವಾಗುತ್ತಿದ್ದ ಪಿಚ್ ನಲ್ಲಿ 5 ಬೌಲರ್ ಗಳನ್ನು ಮಾತ್ರ ನೆಚ್ಚಿಕೊಳ್ಳಲಾಯಿತು
ಅನುಭವಿ ವಿಶ್ವ ಶ್ರೇಷ್ಠ ಸ್ಪಿನ್ನರ್ ಅಶ್ವಿನ್ ಅವರನ್ನು ಕಣಕ್ಕಿಳಿಸದಿರುವುದು
ರೋಹಿತ್ ಶರ್ಮಾ, ರಾಹುಲ್, ವಿರಾಟ್ ಕೊಹ್ಲಿ ಹೊರತುಪಡಿಸಿ ಅಗ್ರ ಕ್ರಮಾಂಕದ ಬ್ಯಾಟರ್ ಗಳ ವೈಫಲ್ಯ
ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಪ್ರಮುಖ ಬೌಲರ್ ಗಳು ಫೈನಲ್ ಪಂದ್ಯದಲ್ಲಿ ಕೈ ಚೆಲ್ಲಿದರು
ಕಳಪೆ ಫೀಲ್ಡಿಂಗ್ ಕೂಡ ಸೋಲಿಗೆ ಕಾರಣ
ವೈಡ್ ಮೂಲಕ ಹೆಚ್ಚು ರನ್ ಬಿಟ್ಟು ಕೊಟ್ಟಿದ್ದು
ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲಾಬ್ಯುಶೇನ್ ಅವರ 4ನೇ ವಿಕೆಟ್ ಜೊತೆಯಾಟಕ್ಕೆ ಬ್ರೇಕ್ ಹಾಕದಿರುವುದು
ಆಸ್ಟ್ರೇಲಿಯಾ ಗೆಲುವಿಗೆ ಕಾರಣಗಳ ಬಗ್ಗೆಯೂ ಚರ್ಚೆ ನಡೆದಿದೆ.
ಅತ್ಯಂತ ನಿರ್ಣಾಯಕವಾದ ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದ್ದು
ಮೊದಲೇ ಪ್ಲಾನ್ ಮಾಡಿಕೊಂಡು ಭಾರತದ ಪ್ರತಿ ಬ್ಯಾಟರ್ ಗೂಗು ಶಿಸ್ತು ಬದ್ಧ ಬೌಲಿಂಗ್ ದಾಳಿ
ಶ್ರೇಷ್ಠ ದರ್ಜೆಯ ಫೀಲ್ಡಿಂಗ್
ಮೂರು ವಿಕೆಟ್ ಬೇಗನೆ ಕಳೆದುಕೊಂಡರೂ ಗಲಿಬಿಲಿಯಾಗದೆ ಇನಿಂಗ್ಸ್ ಕಟ್ಟಿದ್ದು
ಟ್ರಾವಿಸ್ ಹೆಡ್ ಅದ್ಭುತ ಆಟ