
ಭಾರತದಲ್ಲಿ ನಡೆಯುತ್ತಿರುವ ಏಕದಿನ ಕ್ರಿಕೆಟ್ ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡದ ನೀರಸ ಪ್ರದರ್ಶನದ ಮಧ್ಯೆ ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಇಂಜಮಾಮ್-ಉಲ್-ಹಕ್ ಅವರು ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ವಿಶ್ವ ಕಪ್ ನಲ್ಲಿ ಪಾಕಿಸ್ತಾನ ಸತತ ವೈಫಲ್ಯ ಕಂಡಿದೆ. ಟೂರ್ನಿಯಲ್ಲಿ ಮೊದಲ ಹಂತ ದಾಟುವಲ್ಲಿ ಪಾಕ್ ತಂಡ ವಿಫಲವಾಗಿದೆ. ಹೀಗಾಗಿ ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದ ಬಳಿಕ ತವರಿನಲ್ಲೇ ತೀವ್ರ ಟೀಕೆಗೆ ಗುರಿಯಾಗಿದೆ. ಇದೇ ಹೊತ್ತಲ್ಲಿ ಇಂಜಮಾಮ್ ಉಲ್ ಹಕ್ ರಾಜೀನಾಮೆ ನೀಡಿದ್ದಾರೆ.
ಇಂಜಮಾಮ್-ಉಲ್-ಹಕ್ ಅವರು ಪ್ಲೇಯರ್ ಏಜೆಂಟ್ ತಲ್ಹಾ ರೆಹಮಾನಿಯೊಂದಿಗೆ ಸಂಬಂಧ ಹೊಂದಿರುವ ಕಂಪನಿಯಾದ “ಯಾಜೊ ಇಂಟರ್ನ್ಯಾಶನಲ್ ಲಿಮಿಟೆಡ್” ನಲ್ಲಿ ಷೇರು ಕಾರಣದಿಂದಾಗಿ ಆರೋಪ ಎದುರಿಸುತ್ತಿದ್ದಾರೆ. ವಿಶೇಷವಾಗಿ ರೆಹಮಾನಿ ಅವರು ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್ ಮತ್ತು ಶಾಹೀನ್ ಶಾ ಆಫ್ರಿದಿ ಸೇರಿದಂತೆ ಹಲವಾರು ಪ್ರಮುಖ ಪಾಕಿಸ್ತಾನಿ ಕ್ರಿಕೆಟಿಗರನ್ನು ಪ್ರತಿನಿಧಿಸುತ್ತಾರೆ.
ಉನ್ನತ ಕ್ರಿಕೆಟಿಗರನ್ನು ಪ್ರತಿನಿಧಿಸುವ ಕಂಪನಿಯಲ್ಲಿ ಮುಖ್ಯ ಆಯ್ಕೆಗಾರ ಮತ್ತು ಷೇರುದಾರರಾಗಿ ಇಂಜಮಾಮ್ ಅವರ ದ್ವಿಪಾತ್ರಗಳು ಆಟಗಾರರ ಆಯ್ಕೆಯ ನಿರ್ಧಾರಗಳ ಮೇಲೆ ಪ್ರಭಾವ ಬೀರಬಹುದೇ ಎಂಬ ಪ್ರಶ್ನೆಗಳನ್ನು ಎತ್ತಲಾಗಿದೆ.