ಕೊನೆಯ ಓವರ್ ನಲ್ಲಿ ಭಾರತಕ್ಕೆ ರೋಚಕ ಜಯ: ಮೊದಲ ಪಂದ್ಯದಲ್ಲೇ ಸ್ಟಾರ್ ಆದ ಶಿವಂ ಮಾವಿ

ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಎರಡು ರನ್ ಗಳ ರೋಚಕ ಗೆಲುವು ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ದೀಪಕ್ ಹೂಡ ಅಜೇಯ 41, ಇಶಾನ್ ಕಿಶನ್ 37, ಅಕ್ಷರ್ ಪಟೇಲ್ ಅಜೇಯ 31 ರನ್ ಗಳಿಸಿದರು. ಶ್ರೀಲಂಕಾ ಪರವಾಗಿ ದಿಲ್ಞಾನ್ ಮಧುಸಂಕ, ಮಹೀಶ್ ತೀಕ್ಷ್ನಾ, ಚಾಮಿಕ ಕರುಣರತ್ನೆ, ಧನಂಜಯ ಡಿಸಿಲ್ವ, ವಾನಿಂದು ಹಸರಂಗ ತಲಾ ಒಂದು ವಿಕೆಟ್ ಪಡೆದರು.

ಗೆಲುವಿನ ಗುರಿ ಬೆನ್ನತ್ತಿದ ಶ್ರೀಲಂಕಾ 20 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 160 ರನ್ ಗಳಿಸಿತು. ಕುಶಾಲ್ ಮೆಂಡಿಸ್ 28, ದಶುನ್ ಶನಕ 4,5 ವಾನಿಂದು ಹಸರಂಗ 21, ಚಾಮಿಕ ಕರುಣರತ್ನೆ ಅಜೇಯ 23 ರನ್ ಗಳಿಸಿದರು. ಭಾರತದ ಪರವಾಗಿ ಶಿವಂ ಮಾವಿ 4, ಉಮ್ರಾನ್ ಮಲಿಕ್ 2, ಹರ್ಷಲ್ ಪಟೇಲ್ 2 ವಿಕೆಟ್ ಪಡೆದರು.

ಕೊನೆಯ ಓವರ್‌ನಲ್ಲಿ ರೋಚಕವಾಗಿ ಶ್ರೀಲಂಕಾವನ್ನು ಭಾರತ ಎರಡು ರನ್‌ಗಳಿಂದ ಸೋಲಿಸಿದಾಗ ಶಿವಂ ಮಾವಿ ಕಾರ್ಯಕ್ರಮದ ಸ್ಟಾರ್ ಆಗಿದ್ದರು. ಕೊನೆಯ ಎಸೆತದವರೆಗೂ ಅಭಿಮಾನಿಗಳನ್ನು ತಮ್ಮ ಆಸನದ ತುದಿಯಲ್ಲಿದ್ದ ಪಂದ್ಯದ ಅಂತಿಮ ಓವರ್‌ನಲ್ಲಿ ಆತಿಥೇಯರು ಶ್ರೀಲಂಕಾವನ್ನು ಸೋಲಿಸುವ ಮೂಲಕ ಮಾವಿ ನಾಲ್ಕು ವಿಕೆಟ್‌ಗಳನ್ನು ಪಡೆದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read