ಭಾರತದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಭಾನುವಾರ ಆಸ್ಟ್ರೇಲಿಯಾ ವಿರುದ್ಧ ದೆಹಲಿ ಟೆಸ್ಟ್ ಪಂದ್ಯದಲ್ಲಿ ಭಾರತದ ಎರಡನೇ ಇನ್ನಿಂಗ್ಸ್ ನಲ್ಲಿ 12 ರನ್ ಗಳಿಸುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ವೇಗವಾಗಿ 25,000 ರನ್ ಪೂರೈಸಿದ ಬ್ಯಾಟರ್ ಎನಿಸಿಕೊಂಡರು.
577 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಸಚಿನ್ ತೆಂಡೂಲ್ಕರ್(34,437) ಅವರನ್ನು ಹಿಂದಿಕ್ಕಿ 549 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಕೊಹ್ಲಿ ಹೆಗ್ಗುರುತನ್ನು ತಲುಪಿದ್ದಾರೆ.
ರಿಕಿ ಪಾಂಟಿಂಗ್(588), ಜಾಕ್ವೆಸ್ ಕಾಲಿಸ್(594), ಕುಮಾರ್ ಸಂಗಕ್ಕಾರ(608) ಮತ್ತು ಮಹೇಲಾ ಜಯವರ್ಧನೆ ಪಟ್ಟಿಯಲ್ಲಿದ್ದಾರೆ.
ಒಟ್ಟಾರೆಯಾಗಿ, ಸಚಿನ್ ತೆಂಡೂಲ್ಕರ್ ನಂತರ 25,000 ಅಂತರಾಷ್ಟ್ರೀಯ ರನ್‌ಗಳನ್ನು ತಲುಪಿದ ಆರನೇ ಬ್ಯಾಟ್ಸ್‌ಮನ್ ಮತ್ತು 2 ನೇ ಭಾರತೀಯ ಕೊಹ್ಲಿ. ವಿರಾಟ್ ಕೊಹ್ಲಿ 2010 ರಲ್ಲಿ ಪಾದಾರ್ಪಣೆ ಮಾಡಿದರು. ಇತ್ತೀಚಿನ ವರ್ಷಗಳಲ್ಲಿ ಅವರು ಎಲ್ಲಾ ಸ್ವರೂಪಗಳಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿದ್ದಾರೆ. ಕೊಹ್ಲಿ 106 ಟೆಸ್ಟ್ ಗಳಲ್ಲಿ 27 ಶತಕ ಸೇರಿದಂತೆ 8195 ರನ್‌ಗಳು ಮತ್ತು 115 T20I ಗಳಲ್ಲಿ 1 ಶತಕ ಸಹಿತ 4008 ರನ್, 271 ಏಕದಿನ ಪಂದ್ಯಗಳಲ್ಲಿ46 ಶತಕಗಳೊಂದಿಗೆ 11,809 ರನ್‌ಗಳನ್ನು ವೇಗವಾಗಿ ಪೂರೈಸಿದ್ದಾರೆ.
664 ಪಂದ್ಯಗಳಲ್ಲಿ 34357 ರನ್‌ಗಳೊಂದಿಗೆ ಸಚಿನ್ ತೆಂಡೂಲ್ಕರ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ, ಶ್ರೀಲಂಕಾದ ಕುಮಾರ ಸಂಗಕ್ಕಾರ(594 ಪಂದ್ಯಗಳಲ್ಲಿ 28016), ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ (560 ಪಂದ್ಯಗಳಲ್ಲಿ 27483 ರನ್), ಶ್ರೀಲಂಕಾದ ಮಹೇಲಾ ಜಯವರ್ಧನೆ(265957 ಪಂದ್ಯಗಳಲ್ಲಿ) ಮತ್ತು ದಕ್ಷಿಣ ಆಫ್ರಿಕಾದ ಜಾಕ್ವೆಸ್ ಕಾಲಿಸ್ (519 ಪಂದ್ಯಗಳಲ್ಲಿ 25534).
𝐌𝐢𝐥𝐞𝐬𝐭𝐨𝐧𝐞 𝐔𝐧𝐥𝐨𝐜𝐤𝐞𝐝! 🔓
Congratulations @imVkohli on reaching 2️⃣5️⃣0️⃣0️⃣0️⃣ international runs in international cricket! 🫡
Simply sensational 👏🏻👏🏻#TeamIndia | #INDvAUS | @mastercardindia pic.twitter.com/Ka4XklrKNA
— BCCI (@BCCI) February 19, 2023