ಇಟಲಿ: ಸಿಲಿಂಡರಾಕಾರದ ಕಟ್ಟಡವೊಂದು ಸುರುಳಿಯಾಕಾರದಲ್ಲಿ ತಿರುಗುತ್ತಿದ್ದು ಜನರು ಕೆಳಗೆ ಇಳಿಯುತ್ತಿದ್ದಂತೆ ಭಾಸವಾಗುವ ಕುತೂಹಲದ ಲಿಫ್ಟ್ ಒಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರನ್ನು ತಿರುಗುತ್ತಿರುವಂತೆ ಮಾಡುತ್ತಿದೆ. ಆಪ್ಟಿಕಲ್ ಭ್ರಮೆಯ ಈ ಕಟ್ಟಡವು ತಿರುಗಿದಂತೆ ಕಾಣಿಸುತ್ತಿದ್ದು, ನೋಡುಗರನ್ನು ಅಚ್ಚರಿಗೊಳಿಸುತ್ತದೆ.
ಟ್ವಿಟ್ಟರ್ ಹ್ಯಾಂಡಲ್ ಟೆಕ್ ಬುರ್ರಿಟೋದಿಂದ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಜನರು ಒಂದೇ ದಿಕ್ಕಿನಲ್ಲಿ ಚಲಿಸುತ್ತಿರುವುದನ್ನು ನೋಡಬಹುದು. ಆದರೆ ಆಪ್ಟಿಕಲ್ ಭ್ರಮೆಯಿಂದಾಗಿ ಕಟ್ಟಡವು ತನ್ನಿಂದ ತಾನೇ ತಿರುಗಿದಂತೆ ಕಾಣಿಸುತ್ತದೆ.
ಇಟಲಿಯ ಮಿಲನ್‌ನಲ್ಲಿರುವ ಸ್ಯಾನ್ ಸಿರೊ ಸ್ಟೇಡಿಯಂನ ದೃಶ್ಯ ಇದಾಗಿದೆ. ಈ ವಿಡಿಯೋ ಶೇರ್ ಮಾಡಿಕೊಂಡ ಎರಡೇ ದಿನಗಳಲ್ಲಿ 9 ಲಕ್ಷಕ್ಕೂ ಅಧಿಕ ವ್ಯೂಸ್ ಕಂಡಿದೆ. ಅಬ್ಬಾ! ಇದನ್ನು ವಿಡಿಯೋದಲ್ಲಿಯೇ ನೋಡಲು ಸಾಧ್ಯವಿಲ್ಲ, ತಲೆ ತಿರುಗುತ್ತದೆ, ಇನ್ನು ಲೈವ್ ಆಗಿ ನೋಡಲು ಸಾಧ್ಯವೇ ಇಲ್ಲ ಎಂದು ಹಲವರು ಕಮೆಂಟ್ ಮೂಲಕ ತಿಳಿಸುತ್ತಿದ್ದಾರೆ.
The descending movement of people at San Siro Stadium in Milan, Italy creates the illusion for our brains that the staircase appears to turn in the opposite direction.
pic.twitter.com/VuUAhQU9C4— Tech Burrito (@TechBurritoUno) February 2, 2023