ʼಆರೋಗ್ಯʼ ಕಾಪಾಡಿಕೊಳ್ಳಲು ಸಹಾಯಕ ನುಗ್ಗೆಸೊಪ್ಪಿನ ಸೂಪ್

ನುಗ್ಗೆ ಸೊಪ್ಪಿನಲ್ಲಿ ಸಾಕಷ್ಟು ಔಷಧೀಯ ಗುಣವಿದೆ. ಇದನ್ನು ಸೇವಿಸುವುದರಿಂದ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನುಗ್ಗೆ ಸೊಪ್ಪಿನ ಪಲ್ಯ ಮಾಡಿಕೊಂಡು ಸವಿಯುತ್ತಿರುತ್ತೇವೆ. ಇಲ್ಲಿ ನುಗ್ಗೆ ಸೊಪ್ಪಿನ ಸೂಪ್ ಮಾಡುವ ವಿಧಾನ ಇದೆ ನೋಡಿ.

ಬೇಕಾಗುವ ಸಾಮಗ್ರಿಗಳು:

1 ½ ಕಪ್ ನುಗ್ಗೆಸೊಪ್ಪು, ½ ಟೀ ಸ್ಪೂನ್ – ಜೀರಿಗೆ, 1 ಟೇಬಲ್ ಸ್ಪೂನ್ – ಜಜ್ಜಿದ ಬೆಳ್ಳುಳ್ಳಿ, 6 – ಸಣ್ಣ ಈರುಳ್ಳಿ ಹೆಚ್ಚಿಟ್ಟುಕೊಂಡಿದ್ದು, 1 – ಸಣ್ಣ ಟೊಮೆಟೊ ಹೆಚ್ಚಿಟ್ಟುಕೊಂಡಿದ್ದು, 2 ಕಪ್ – ನೀರು, ಉಪ್ಪು ರುಚಿಗೆ ತಕ್ಕಷ್ಟು, 1 ಟೀ ಸ್ಪೂನ್ – ಎಣ್ಣೆ.

ಮಾಡುವ ವಿಧಾನ:

ನುಗ್ಗೆ ಸೊಪ್ಪಿನ ದಂಟಿನಿಂದ ಎಲೆಗಳನ್ನು ಬೇರ್ಪಡಿಸಿಕೊಂಡು ತೊಳೆದು ಎತ್ತಿಟ್ಟುಕೊಳ್ಳಿ. ನಂತರ ಒಂದು ಪ್ಯಾನ್ ಗೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಜೀರಿಗೆ ಸೇರಿಸಿ ನಂತರ ಬೆಳ್ಳುಳ್ಳಿ ಹಾಕಿ.

ಇದು ಸ್ವಲ್ಪ ಕೆಂಪಗಾಗುತ್ತಲೇ ಫ್ರೈ ಮಾಡಿ. ನಂತರ ಟೊಮೆಟೊ ಸೇರಿಸಿ ಮೆತ್ತಗಾಗುವವರೆಗೆ ಹುರಿದುಕೊಳ್ಳಿ.

ತೊಳೆದಿಟ್ಟುಕೊಂಡ ನುಗ್ಗೆ ಸೊಪ್ಪು ಸೇರಿಸಿ ಉಪ್ಪು ಹಾಕಿ 3 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ. ನಂತರ ನೀರು ಸೇರಿಸಿ 5 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿಕೊಂಡರೆ ರುಚಿಕರವಾದ ಸೂಪ್ ಸವಿಯಲು ಸಿದ್ಧ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read