ಪಾಕಿಸ್ತಾನದ ಕರಾಚಿಯಲ್ಲಿ ಕೈಗಾರಿಕೋದ್ಯಮಿ ಪತ್ನಿ ಕುಡಿದು ಕಾರ್ ಚಲಾಯಿಸಿ ಮೂವರ ಪ್ರಾಣ ತೆಗೆದಿದ್ದಾಳೆ. ಕರಾಚಿಯ ಕರ್ಸಾಜ್ ರಸ್ತೆಯಲ್ಲಿ ಲ್ಯಾಂಡ್‌ಕ್ರೂಸರ್ ಕಾರು, ಮುಂದೆ ಚಲಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದು, ಪಾದಚಾರಿಗೆ ಗುದ್ದಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.
ಪಾಕಿಸ್ತಾನಿ ಮಾಧ್ಯಮ ವರದಿಗಳ ಪ್ರಕಾರ, ನತಾಶಾ ಗುಲ್ ಅಹ್ಮದ್ ಕಾರು ಚಲಾಯಿಸುತ್ತಿದ್ದ ಮಹಿಳೆ. ಆಕೆ ಎನರ್ಜಿ ಲಿಮಿಟೆಡ್‌ನ ಅಧ್ಯಕ್ಷರಾಗಿರುವ ಕೈಗಾರಿಕೋದ್ಯಮಿ ಡ್ಯಾನಿಶ್ ಇಕ್ಬಾಲ್ ಅವರ ಪತ್ನಿ. ನತಾಶಾ ಗುಲ್ ಮದ್ಯದ ನಶೆಯಲ್ಲಿ ಕಾರು ಚಲಾಯಿಸುತ್ತಿದ್ದಳು ಎನ್ನಲಾಗಿದೆ. ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇನ್ನೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಈ ಅಪಘಾತದ ವಿಡಿಯೋ ಈಗ ವೈರಲ್ ಆಗಿದೆ. ಐಷಾರಾಮಿ ಲ್ಯಾಂಡ್‌ಕ್ರೂಸರ್ ಕಾರು ಬೈಕ್ ಗೆ ಡಿಕ್ಕಿ ಹೊಡೆಯೋದನ್ನು ನೋಡಬಹುದು. ಕರಾಚಿಯಲ್ಲಿ ಕರ್ಸಾಜ್ ರಸ್ತೆ ಅಪಘಾತದ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಲಾಗಿದೆ. ಘಟನೆ ನಡೆದ ನಂತ್ರ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಳು ಎನ್ನಲಾಗಿದೆ.
ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ರೂ ಚಾಲಕಿ ಮುಖದಲ್ಲಿ ಪಶ್ಚಾತಾಪವಿರಲಿಲ್ಲ. ಇದನ್ನು ನೋಡಿದ ಸ್ಥಳೀಯರು ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ನಾಲ್ಕಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
Another 'spoiled kid' runs over six people in Karachi's Karsaz road, leaving two dead on the spot.
The girl driving this vehicle was said to be the daughter of a well-known textile company's director.
The vehicle is registered under GulAhmed Wind Power LTD. #Karsazaccident pic.twitter.com/tkn7EHuwJE
— Kashan Bhatti (@MkashanBhatti_) August 19, 2024