ನಿವೃತ್ತರಾದ ಡಿ ದರ್ಜೆ ನೌಕರನಿಗೆ ವಿಶೇಷ ಗೌರವದೊಂದಿಗೆ ‘ಬೀಳ್ಕೊಡುಗೆ’

Special Gift! ನಿವೃತ್ತಿ ದಿನ ಎಸಿ ಕಾರಿನಲ್ಲಿ ಮನೆಗೆ ತೆರಳಿದ ಡಿ ದರ್ಜೆ ನೌಕರ! | udayavani

‘ನಿವೃತ್ತಿ’ ಎಂಬುದು ಪ್ರತಿಯೊಬ್ಬ ಉದ್ಯೋಗಿ ಜೀವನದಲ್ಲಿ ನಡೆಯುವ ಸಹಜ ಪ್ರಕ್ರಿಯೆ. ಆದರೆ ನಿವೃತ್ತಿ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳು ನೀಡುವ ಬೀಳ್ಕೊಡುಗೆ ವಿಶೇಷ ರೀತಿಯಲ್ಲಿ ಇದ್ದರೆ ಅದು ಅರ್ಥಪೂರ್ಣವಾಗಿರುತ್ತದೆ. ಅಂತಹದೊಂದು ಘಟನೆ ಸಾಗರದಲ್ಲಿ ನಡೆದಿದೆ.

ಹೌದು, ಸಾಗರ ಉಪ ವಿಭಾಗ ಅಧಿಕಾರಿ ಕಚೇರಿಯಲ್ಲಿ ಡಿ ದರ್ಜೆ ನೌಕರರಾಗಿ ಸೇವೆ ಸಲ್ಲಿಸಿದ್ದ ಕೃಷ್ಣಪ್ಪನವರು ಸೋಮವಾರದಂದು ನಿವೃತ್ತರಾಗಿದ್ದು, ಅವರ ಬೀಳ್ಕೊಡುಗೆ ಸಮಾರಂಭವನ್ನು ಉಪ ವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ ಅವಿಸ್ಮರಣೀಯವಾಗಿಸಿದ್ದಾರೆ.

ಕೃಷ್ಣಪ್ಪನವರು ನಿವೃತ್ತರಾದ ಸಂದರ್ಭದಲ್ಲಿ ಅವರಿಗೆ ಹಾರ, ನೆನಪಿನ ಕಾಣಿಕೆ ನೀಡಿದ್ದರ ಜೊತೆಗೆ ಉಪ ವಿಭಾಗಾಧಿಕಾರಿ ಪಲ್ಲವಿಯವರು ತಮ್ಮ ಸರ್ಕಾರಿ ಕಾರಿನಲ್ಲಿ ಅವರನ್ನು ಮನೆಯವರೆಗೆ ಕಳುಹಿಸಿ ಬಂದಿದ್ದಾರೆ. ಈ ಸಂದರ್ಭದಲ್ಲಿ ಕೃಷ್ಣಪ್ಪನವರನ್ನು ತಾವು ಕುಳಿತುಕೊಳ್ಳುವ ಮುಂದಿನ ಸೀಟಿನಲ್ಲಿ ಕೂರಿಸಿದ್ದಲ್ಲದೆ ಪಲ್ಲವಿ ಸಾತೇನಹಳ್ಳಿ ಹಿಂದಿನ ಸೀಟಿನಲ್ಲಿ ಆಸೀನರಾಗಿದ್ದು, ಕೃಷ್ಣಪ್ಪನವರ ಮನೆಯವರೆಗೂ ತೆರಳಿ ಶುಭಕೋರಿ ಬಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read