ಬೆಂಗಳೂರು: ಒಳಮೀಸಲಾತಿ ಕುರಿತು ನ್ಯಾ.ಹೆಚ್.ಎನ್.ನಾಗಮೋಹನ್ ದಾಸ್ ಆಯೋಗ ನೀಡಿದ್ದ ವರದಿ ಬಗ್ಗೆ ಚರ್ಚಿಸಲು ನಿಗದಿಯಾಗಿದ್ದ ಸಚಿವ ಸಂಪುಟ ವಿಶೇಷ ಸಭೆ ಮುಂದೂಡಿಕೆಯಾಗಿದೆ.
ಶನಿವಾರ ಸಂಜೆ ಕರೆಯಲಾಗಿದ್ದ ಸಚಿವ ಸಂಪುಟ ವಿಶೇಷ ಸಭೆ ಮಂಗಳವಾರ ಆಗಸ್ಟ್ 19ರಂದು ಸಂಜೆ 5 ಗಂಟೆಗೆ ಮುಂದೂಡಲಾಗಿದೆ. ಈ ಬಗ್ಗೆ ಸರ್ಕಾರದ ಅಪರ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರಿಶಿಷ್ಟಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸುವ ಕುರಿತು ಶಿಫಾರಸು ಮಾಡಲು ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗವು ಆಗಸ್ಟ್ 4ರಂದು ತನ್ನ ವರದಿಯನ್ನು ಸಲ್ಲಿಸಿತ್ತು.