ಪುರಿ: ಸೌರವ್ ಗಂಗೂಲಿ ಸಹೋದರ ಇದ್ದ ಸ್ಪೀಡ್ ಬೋಟ್ ಪಲ್ಟಿಯಾದ ಘಟನೆ ಒಡಿಶಾದ ಪುರಿ ಬೀಚ್ ನಲ್ಲಿ ನಡೆದಿದೆ.
ಪುರಿ ಬೀಚ್ ನಲ್ಲಿ ವಾಟರ್ ಸ್ಪೋರ್ಟ್ಸ್ ಕಾರ್ಯಕ್ರಮದ ವೇಳೆ ಸೌರವ್ ಗಂಗೂಲಿ ಸಹೋದರ ಸ್ನೇಹಶಿಶ್ ಗಂಗೂಲಿ ಹಾಗೂ ಪತ್ನಿ ಅರ್ಪಿತಾ ಇದ್ದ ಸ್ಪೀಡ್ ಬೋಟ್ ಅಲೆಗಳ ಅಬ್ಬರಕ್ಕೆ ಸಿಲುಕಿ ಏಕಾಏಕಿ ಪಲ್ಟಿಯಾಗಿದೆ. ತಕ್ಷಣ ರಬ್ಬರ್ ಬೋಟ್ ಮೂಲಕ ಇಬ್ಬರನ್ನು ರಕ್ಷಿಸಲಾಗಿದೆ.
ಸ್ನೇಹಶಿಶ್ ಗಂಗೂಲಿ ಹಾಗೂ ಪತ್ನಿ ಅರ್ಪಿತಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಮುದ್ರ ಪ್ರಕ್ಷುಬ್ಧಗೊಂಡಿದ್ದರೂ ಬೋಟಿಂಗ್ ಗೆ ಹೋಗಿದ್ದರು. ಈ ವೇಳೆ ಬೃಹತ್ ಅಲೆಗಳ ಹೊಡೆತಕ್ಕೆ ಸಿಲುಕಿದ ಬೋಟ್ ಪಲ್ಟಿಯಾಗಿದೆ. ತಕ್ಷಣ ರಬ್ಬರ್ ಬೋಟ್ ಮೂಲಕ ತೆರಳಿ ಲೈಫ್ ಗಾರ್ಡ್ ಸಿಬ್ಬಂದಿ ಇಬ್ಬರನ್ನೂ ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.