ಮಂಗಳೂರು: ಸೌಜನ್ಯಾ ಕೊಲೆ, ಅತ್ಯಾಚಾರ ಮಾಡಿದ್ದು ವಿಠಲ ಗೌಡ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ ಸೌಜನ್ಯಾ ಅತ್ಯಾಚಾರ, ಕೊಲೆ ಮಾಡಿದ್ದು ವಿಠಲ ಗೌಡ. ಈ ಬಗ್ಗೆ ನನ್ನ ಬಳಿ ಮಾಹಿತಿ ಮತ್ತು ಸಾಕ್ಷ್ಯಗಳಿವೆ. ಎಲ್ಲವನ್ನೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕೊಡುತ್ತೇನೆ ಎಂದು ತಿಳಿಸಿದ್ದಾರೆ.
ಸೌಜನ್ಯಾ ಹತ್ಯೆ ಪ್ರಕರಣದ ತನಿಖೆಯನ್ನು ಮತ್ತೆ ಮುಂದುವರೆಸುವಂತೆ ದೂರು ನೀಡುತ್ತೇನೆ. ಸಂಪೂರ್ಣ ತನಿಖೆ ನಡೆದು ಮುಗ್ಧ ಹೆಣ್ಣುಮಗಳ ಸಾವಿಗೆ ನ್ಯಾಯಸಿಗಬೇಕು ಎಂದು ಒತ್ತಾಯಿಸಿದರು.