ಬಾಲಕಿ ಸಾಕ್ಷಿಯ ನೆರವಿಗೆ ಬರದ ಜನರು: ನಟ ಸೋನು ಸೂದ್​ ಆಕ್ರೋಶ

ನವದೆಹಲಿ: ಮೇ 28 ರಂದು ದೆಹಲಿಯಲ್ಲಿ ನಡೆದ 16 ವರ್ಷದ ಬಾಲಕಿಯ ಭೀಕರ ಹತ್ಯೆಯ ಬಗ್ಗೆ ನಟ ಸೋನು ಸೂದ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ತನ್ನ ಮಾತು ಕೇಳದ ಸಾಕ್ಷಿಯನ್ನು 34 ಬಾರಿ ಇರಿದು, ಒದ್ದು ಆಕೆಯ ತಲೆಯ ಮೇಲೆ ಕಾಂಕ್ರೀಟ್ ಬ್ಲಾಕ್‌ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಸಾಹಿಲ್​ ಖಾನ್​ ಎಂಬ 20 ವರ್ಷದ ಯುವಕ. ಇಡೀ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಇದೀಗ ಈ ಕೊಲೆಯ ಕುರಿತು ಸೋನು ಸೂದ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ‘ಹೇಡಿ’ ಎನ್ನುವ ಮೂಲಕ ಘಟನೆಯನ್ನು ನೋಡಿದ ಜನರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕೊಲೆ ನಡೆಯುತ್ತಿದ್ದ ವೇಳೆ ಹಲವಾರು ಮಂದಿ ಅದನ್ನು ನೋಡುತ್ತಿದ್ದರು. ಆದರೆ ಯಾರೂ ಸಹಾಯಕ್ಕೆ ಹೋಗಿರಲಿಲ್ಲ. ಇದನ್ನು ಸೋನು ಸೂದ್​ ವಿರೋಧಿಸಿದ್ದಾರೆ. ನಿಮ್ಮ ಸುತ್ತಲೂ ನಡೆಯುತ್ತಿರುವ ಅಪರಾಧವನ್ನು ನಿರ್ಲಕ್ಷಿಸುವುದು ಹೇಡಿತನದ ಕೆಲಸವಾಗಿದೆ. ಅಲ್ಲಿ ಯಾರೂ ಆಕೆಯ ಜೀವವನ್ನು ಕಾಪಾಡಲು ಮುಂದಾಗದ ಕಾರಣ ಪಾಲಕರು ತಮ್ಮ ಮಗಳನ್ನು ಕಳೆದುಕೊಂಡರು ಎಂದಿದ್ದಾರೆ. ಯಾರೂ ಪೊಲೀಸ್ ನಿಯಂತ್ರಣ ಕೊಠಡಿಗೆ (ಪಿಸಿಆರ್) ಕರೆ ಮಾಡದಿದ್ದುದು ಕೂಡ ದುರದೃಷ್ಟಕರ ಎಂದಿದ್ದಾರೆ.

ಅಪರಾಧ ನಡೆದ 25 ನಿಮಿಷಗಳ ನಂತರ ಭಾನುವಾರ ಸಂಜೆ 9.35 ರ ಸುಮಾರಿಗೆ ಪೊಲೀಸ್ ಮಾಹಿತಿದಾರರು ಬೀಟ್ ಅಧಿಕಾರಿಯನ್ನು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ. ಈ ಭೀಕರ ಹತ್ಯೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ, ನೀಲಿ ಟೀ ಶರ್ಟ್ ಧರಿಸಿರುವ ಸಾಹಿಲ್, ಹುಡುಗಿಗೆ ಇರಿದಿರುವುದನ್ನು ಕಾಣಬಹುದು. ಅವನು ಅವಳನ್ನು ಇರಿದು ಹಾಕುವಾಗ ಸುಮಾರು ಏಳೆಂಟು ಮಂದಿ ಪ್ರೇಕ್ಷಕರು ಇದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read