ಸೋನು ಸೂದ್‌ರನ್ನು ಭೇಟಿಯಾದ ಹಳ್ಳಿ ಪ್ರತಿಭೆ ಅಮರಜೀತ್‌

ಇತ್ತೀಚೆಗೆ ಬಹಳ ವೈರಲ್‌ ಆಗಿರುವ ಬಿಹಾರದ ಹುಡುಗ ಅಮರಜೀತ್ ಜೈಕರ್ ಬಗ್ಗೆ ನೀವು ಕೇಳಿರಬಹುದು. ಅವರು ದಿಲ್ ದೇ ದಿಯಾ ಹೈ ಹಾಡನ್ನು ಹಾಡಿ ರಾತ್ರೋರಾತ್ರಿ ಪ್ರಸಿದ್ಧರಾದರು. ಈ ವಿಡಿಯೋ ಸೋನು ಸೂದ್ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರಿಟಿಗಳ ಗಮನ ಸೆಳೆದಿತ್ತು. ಅವರು ತಮ್ಮ ಮುಂಬರುವ ಚಿತ್ರ ಫತೇಹ್‌ನಲ್ಲಿ ಜೈಕರ್‌ಗೆ ಹಾಡಲು ಅವಕಾಶ ನೀಡಿದರು.

2004 ರಲ್ಲಿ ಬಿಡುಗಡೆಯಾದ ಮಸ್ತಿ ಸಿನಿಮಾದ ಆನಂದ್ ರಾಜ್ ಸಂಯೋಜಿಸಿದ ದಿಲ್ ದೇ ದಿಯಾ ಹೈ ಹಾಡನ್ನು ಬಹಳ ಮಾಧುರ್ಯ ಪೂರ್ಣವಾಗಿ ಹಾಡಿದ್ದು, ಇವರ ಹಾಡಿಗೆ ನೆಟ್ಟಿಗರು ಫಿದಾ ಆಗಿದ್ದರು.

ನಟ ಸೋನು ಸೂದ್ ಕೂಡ ಈ ತರುಣನ ಹಾಡಿಗೆ ಮನ ಸೋತಿದ್ದು, ಏಕ್ ಬಿಹಾರಿ ಸೌ ಪೇ ಭಾರಿ ಎಂದು ಆತನನ್ನು ಶ್ಲಾಘಿಸಿದ್ದರು. ಸೋನು ಸೂದ್ ಟ್ವಿಟ್‌ಗೆ ಪ್ರತಿಕ್ರಿಯಿಸಿರುವ ಜೈಕರ್ ಲವ್ ಯೂ ಸರ್ ಎಂದು ಪ್ರತಿಕ್ರಿಯಿಸಿದ್ದರು. ಹಾಗೆಯೇ ಸಾವಿರಾರು ಜನ ಸೋಶಿಯಲ್ ಮೀಡಿಯಾ ಬಳಕೆದಾರರು ಕೂಡ ಈತನ ಪ್ರತಿಭೆ ಮೆಚ್ಚಿ ಹೊಗಳಿದ್ದರು.

ಇದೀಗ ಸೋನು ಸೂದ್‌ ಅವರನ್ನು ಭೇಟಿ ಮಾಡಿರುವ ವಿಷಯವನ್ನು ಅಮರ್‌ಜೀತ್‌ ಹಂಚಿಕೊಂಡಿದ್ದಾರೆ. ತಾವು ಮುಂಬೈ ತಲುಪಿ ಸೋನು ಸೂದ್ ಅವರನ್ನು ಭೇಟಿ ಮಾಡಿರುವುದಾಗಿ ಹೇಳಿಕೊಂಡಿರುವ ಅವರು ಅವರ ಜೊತೆಗಿನ ಫೋಟೋ ಶೇರ್‌ ಮಾಡಿದ್ದಾರೆ. “ಇಡೀ ಭಾರತದಲ್ಲಿ ನನಗೆ ಸ್ವಲ್ಪ ಮನ್ನಣೆ ಸಿಗಲು ನೀವೇ ಕಾರಣ” ಎಂದು ಬರೆದಿದ್ದಾರೆ.

https://twitter.com/AmarjeetJaikar3/status/1630200761136345089?ref_src=twsrc%5Etfw%7Ctwcamp%5Etweetembed%7Ctwterm%5E1630200761136345089%7Ctwgr%5E82aa3ab1771eb7d924e5f28750aeae0eb8bd251c%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fsonu-sood-meets-viral-bihar-boy-amarjeet-jaikar-in-mumbai-see-pic-2340531-2023-02-28

https://twitter.com/SonuSood/status/1630207202454835200?ref_src=twsrc%5Etfw%7Ctwcamp%5Etweetembed%7Ctwterm%5E1630207202454835200%7Ctwgr%5E82aa3ab1771eb7d924e5f28750aeae0eb8bd251c%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fsonu-sood-meets-viral-bihar-boy-amarjeet-jaikar-in-mumbai-see-pic-2340531-2023-02-28

https://twitter.com/Swati1402/status/1630246318429044738?ref_src=twsrc%5Etfw%7Ctwcamp%5Etweetembed%7Ctwterm%

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read