ಹರಿಯಾಣದ ಸೋನಿಪತ್‌ನಲ್ಲಿರುವ ಪ್ರತಿಷ್ಠಿತ ಓಪಿ ಜಿಂದಾಲ್ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಒಂದು ವಿಚಿತ್ರ ಘಟನೆ ಎಲ್ಲರ ಗಮನ ಸೆಳೆದಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯನ್ನು ಬಾಯ್ಸ್ ಹಾಸ್ಟೆಲ್‌ಗೆ ರಹಸ್ಯವಾಗಿ ಕರೆದೊಯ್ಯಲು ವಿಚಿತ್ರ ಉಪಾಯವನ್ನು ಹೂಡಿದ್ದ. ಆತ ಆಕೆಯನ್ನು ದೊಡ್ಡ ಸೂಟ್‌ಕೇಸ್‌ನಲ್ಲಿ ಬಚ್ಚಿಟ್ಟು ಒಳಗೆ ಕರೆದೊಯ್ಯಲು ಪ್ರಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ನಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಹಾಸ್ಟೆಲ್‌ನ ಭದ್ರತಾ ಸಿಬ್ಬಂದಿ ದೊಡ್ಡ ಸೂಟ್‌ಕೇಸ್ ಅನ್ನು ತೆರೆದಾಗ ಅದರೊಳಗೆ ಯುವತಿಯೊಬ್ಬಳು ಕುಳಿತಿದ್ದಳು. ಈ ಅನಿರೀಕ್ಷಿತ ದೃಶ್ಯವನ್ನು ಕಂಡು ಸುತ್ತಲೂ ಇದ್ದ ವಿದ್ಯಾರ್ಥಿಗಳು ಆಶ್ಚರ್ಯಚಕಿತರಾದರು. ಅಲ್ಲಿದ್ದ ಕೆಲವರು ಈ ಸಂಪೂರ್ಣ ಘಟನೆಯನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.
ಈ ಘಟನೆಯು ವಿಶ್ವವಿದ್ಯಾಲಯದ ಆವರಣದ ಭದ್ರತೆ ಮತ್ತು ವಿದ್ಯಾರ್ಥಿಗಳ ವರ್ತನೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕೆಲವರು ಇದನ್ನು ಹಾಸ್ಯಾಸ್ಪದ ಘಟನೆ ಎಂದು ಪರಿಗಣಿಸಿದರೆ, ಇನ್ನು ಕೆಲವರು ಇದು ನಿಯಮ ಉಲ್ಲಂಘನೆ ಮತ್ತು ಭದ್ರತಾ ಲೋಪ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ಈ ಸೂಟ್‌ಕೇಸ್ ಪ್ರೇಮ ಪ್ರಕರಣವು ಸೋನಿಪತ್ ವಿಶ್ವವಿದ್ಯಾಲಯದಲ್ಲಿ ತಮಾಷೆಯ ಚರ್ಚೆಗೆ ಗ್ರಾಸವಾಗಿದೆ.
Guy tried Sneaking his Girlfriend into the Boys hostel in a Suitcase.. one Bump and she screamed from inside. guards Heard it and they got Caught, Op Jindal Uni
— Ghar Ke Kalesh (@gharkekalesh) April 12, 2025
pic.twitter.com/xBkBTYymdt