ಮದುವೆಯಾದ ಎರಡೇ ತಿಂಗಳಿಗೆ ಮನೆ ಮಾರಾಟಕ್ಕೆ ಮುಂದಾದ ಸೋನಾಕ್ಷಿ ಸಿನ್ಹಾ..! ಸುದ್ದಿ ಕೇಳಿ ಅಭಿಮಾನಿಗಳು ‘ಶಾಕ್’

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಮದುವೆಯಾಗಿ ಇನ್ನೂ ಎರಡು ತಿಂಗಳು ಕಳೆದಿಲ್ಲ. ಆಗ್ಲೇ ತಮ್ಮ ಪ್ರೀತಿಯ ಮನೆಯನ್ನು ಮಾರಾಟಕ್ಕಿಟ್ಟಿದ್ದಾರೆ. ಇದು ಅಭಿಮಾನಿಗಳಲ್ಲಿ ಅನುಮಾನ ಹುಟ್ಟಿಸಿದೆ. ಇಷ್ಟು ಬೇಗ ಮನೆ ಮಾರಾಟ ಯಾಕೆ ಮಾಡ್ತಿದ್ದೀರಿ ಎಂದು ಅಭಿಮಾನಿಗಳು ಪ್ರಶ್ನೆ ಕೇಳಲು ಶುರು ಮಾಡಿದ್ದಾರೆ.

ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಸೋನಾಕ್ಷಿ ಸಿನ್ಹಾ, ಜಹೀರ್ ಇಕ್ಬಾಲ್ ಅವರನ್ನು ವಿವಾಹವಾದ್ರು. ಅವರು ಮದುವೆಯಾದ ಅಪಾರ್ಟ್ಮೆಂಟ್ ಅನ್ನು ಈಗ ಮಾರಾಟಕ್ಕೆ ಇಟ್ಟಿದ್ದಾರೆ. 2023ರಲ್ಲಿ ಸೋನಾಕ್ಷಿ ಸಿನ್ಹಾ, 4,000 ಚದರ ಅಡಿ ಕಾರ್ಪೆಟ್ ಪ್ರದೇಶವನ್ನು ಹೊಂದಿರುವ ಈ ಮನೆ ಖರೀದಿ ಮಾಡಿದ್ದರು.

ರಿಯಲ್ ಎಸ್ಟೇಟ್ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಈ ಅಪಾರ್ಟ್ಮೆಂಟ್‌ ವಿಡಿಯೋ ಪೋಸ್ಟ್‌ ಮಾಡಲಾಗಿದ್ದು, ಇದು ಮಾರಾಟಕ್ಕಿದೆ ಎಂದು ಜಾಹೀರಾತು ನೀಡಲಾಗಿದೆ. ಇದನ್ನು ನೋಡಿದ ಅಭಿಮಾನಿಗಳು ಇದು ಸೋನಾಕ್ಷಿ ಸಿನ್ಹಾ ಮದುವೆಯಾದ ಮನೆ ಎನ್ನುತ್ತಿದ್ದಾರೆ.

ಜಾಹೀರಾತಿನಲ್ಲಿ ಪ್ರತಿಷ್ಠಿತ 81 ಓರಿಯಟ್ ಬಿಲ್ಡಿಂಗ್, ಬಾಂದ್ರಾ ರಿಕ್ಲಮೇಶನ್‌ನಲ್ಲಿ ಸಮುದ್ರಕ್ಕೆ ಎದುರಾಗಿರುವ ಐಷಾರಾಮಿ ಅಪಾರ್ಟ್ಮೆಂಟ್ ಎಂದು ಹೇಳಲಾಗಿದೆ.

ಮೂಲತಃ 4 ಬೆಡ್‌ ರೂಮಿನ ಈ ಮನೆಯನ್ನು ವಿಶಾಲವಾದ 2 ಬೆಡ್‌ ರೂಮ್‌ ಮನೆಯಾಗಿ ಪರಿವರ್ತಿಸಲಾಗಿದೆ. ಒಳಾಂಗಣ ಸಂಪೂರ್ಣ ಆಧುನಿಕ ಸೌಕರ್ಯಗಳೊಂದಿಗೆ ಸುಸಜ್ಜಿತವಾಗಿದೆ. 3 ಕಾರ್ ಪಾರ್ಕಿಂಗ್ ಸ್ಥಳಗಳನ್ನು ಮನೆ ಒಳಗೊಂಡಿದೆ. ಈಗ ಅಪಾರ್ಟ್‌ಮೆಂಟ್‌ ನ್ನು 25 ಕೋಟಿ ರೂಪಾಯಿಗೆ ಮಾರಾಟಕ್ಕೆ ಇಡಲಾಗಿದೆ. ಈ ಜಾಹೀರಾತನ್ನು  ಸೋನಾಕ್ಷಿ ಲೈಕ್ ಮಾಡಿದ್ದಾರೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read