Viral Video | ದರೋಡೆಕೋರರಿಂದ ತಾಯಿಯನ್ನು ರಕ್ಷಿಸಿದ ಪುತ್ರ; ಶಹಬ್ಬಾಸ್ ಮಗನೇ ಅಂದ್ರು ನೆಟ್ಟಿಗರು

ಪರ್ಸ್ ದೋಚಲು ಯತ್ನಿಸುತ್ತಿದ್ದ ದರೋಡೆಕೋರನಿಂದ ತನ್ನ ತಾಯಿಯನ್ನು ರಕ್ಷಿಸುತ್ತಿರುವ ಮಗನ ವಿಡಿಯೋ ವೈರಲ್ ಆಗಿದೆ. ವಿಡಿಯೋವನ್ನು ಗುಡ್‌ನ್ಯೂಸ್ ಮೂವ್‌ಮೆಂಟ್‌ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದೆ. ಇದು ಇಲ್ಲಿಯವರೆಗೆ 2 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ತಾಯಿ ಮತ್ತು ಅವಳ ಮಗ ಕೈ ಹಿಡಿದುಕೊಂಡು ಪಾದಚಾರಿ ಮಾರ್ಗದಲ್ಲಿ ನಡೆಯುವುದನ್ನು ತೋರಿಸುತ್ತದೆ. ಇಬ್ಬರು ದರೋಡೆಕೋರರು ರಸ್ತೆಯೊಂದರ ಬದಿಯಲ್ಲಿ ನಿಂತುಕೊಂಡು ದೂರದಿಂದ ತಾಯಿ-ಮಗನ ಚಲನವಲನವನ್ನು ಗಮನಿಸುತ್ತಿದ್ರು.

ಹತ್ತಿರ ಬಂದಾಗ, ದರೋಡೆಕೋರರಲ್ಲಿ ಒಬ್ಬ ತಾಯಿ-ಮಗ ಇಬ್ಬರ ಬಳಿಗೆ ಬಂದು ಅವರ ಪರ್ಸ್ ಕಸಿದುಕೊಂಡು ಓಡಿಹೋಗಲು ಪ್ರಯತ್ನಿಸಿದ್ದಾನೆ. ಆದರೆ, ಮಗ ಮಧ್ಯಪ್ರವೇಶಿಸಿ ದರೋಡೆಕೋರನನ್ನು ಪರ್ಸ್ ತೆಗೆದುಕೊಳ್ಳದಂತೆ ತಡೆದಿದ್ದಾನೆ. ದರೋಡೆಕೋರರನ್ನು ಓಡಿಸಲು ಮಗ ಯಶಸ್ವಿಯಾಗಿದ್ದಾನೆ. ದರೋಡೆಕೋರನನ್ನು ನಿಭಾಯಿಸಲು ಅವನ ತಾಯಿಯೂ ಸಹಾಯ ಮಾಡುತ್ತಾಳೆ.

ಮಗನ ಧೈರ್ಯ ಕಂಡು ನೆಟ್ಟಿಗರು ಶಹಬ್ಬಾಸ್ ಗಿರಿ ನೀಡಿದ್ದಾರೆ. ತನ್ನ ಮಗನನ್ನು ಉಳಿಸಲು ಪರ್ಸ್ ನತ್ತ ಕಾಳಜಿ ತೋರದೆ ತಾಯಿ ಕೂಡ ಹೋರಾಡಿದ್ದು ನಿಜಕ್ಕೂ ಖುಷಿ ತಂದಿತು ಎಂದೆಲ್ಲಾ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.

https://youtu.be/peSFyRSAzUg

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read