ನವದೆಹಲಿ: ಕೇವಲ 20 ರೂಪಾಯಿಗಾಗಿ ಮಗನೊಬ್ಬ ಹೆತ್ತ ತಾಯಿಯನ್ನೇ ಬರ್ಬರವಾಗಿ ಕೊಲೆಗೈದಿರುವ ಘಟನೆ ಹರ್ಯಾಣದ ನೂಹ್ ನಲ್ಲಿ ನಡೆದಿದೆ.
ಇಲ್ಲಿನ ಜೈಸಿಂಗಪುರ ಗ್ರಾಮದಲ್ಲಿ ಈ ಘೋರ ಘಟನೆ ನಡೆದಿದೆ. ಜೆಮ್ ಶೆಡ್ ತಾಯಿಯನ್ನೇ ಕೊಂದ ಮಗ. ರಜಿಯಾ ಮಗನಿಂದ ಹತ್ಯೆಯಾದ ತಾಯಿ. ತಾಯಿ ಬಳಿ ಹಣ ನೀಡುವಂತೆ ಕೇಳಿದ್ದಾನೆ. ಅದಕ್ಕೆ ತಾಯಿ ಹಣ ಕೊಡಲು ನಿರಾಕರಿಸಿದ್ದಾರೆ. 20 ರೂಪಾಯಿ ಬೇಕು ಕೊಡು ಎಂದು ಮತ್ತೆ ಗಲಾಟೆ ಮಾಡಿದ್ದಾನೆ. ತಾಯಿ ಹಣ ಕೊಡದಿದ್ದಾಗ ಕೋಪದ ಬರದಲ್ಲಿ ಕೊಡಲಿಯಿಂದ ತಾಯಿಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.
ಘಟನೆ ಬಳಿಕ ಒಂದು ದಿನ ತಾಯಿಯ ಶವದೊಂದಿಗೆ ಮನೆಯಲ್ಲಿ ಕಳೆದಿದ್ದಾಬೆ. ಪೊಲೀಸರ ಪ್ರಕಾರ ಮಗ ಜೆಮ್ ಶೆಡ್ ಮಾದಕ ವಸ್ತುಗಳ ವ್ಯಸನಿಯಾಗಿದ್ದ. ಗಾಂಜಾ, ಅಫೀಮು ಸೇವಿಸುತ್ತಿದ್ದ, ನಾಲ್ಕು ತಿಂಗಳ ಹಿಂದಷ್ಟೇ ಜೆಮ್ಶೆಡ್ ತಂದೆ ಮೃತಪಟ್ಟಿದ್ದರು. ತನ್ನ ವ್ಯಸನಕ್ಕೆ ಹಣ ಸಿಗದಿದ್ದಾಗ ತಾಯಿ ಬಳಿ ಕೇಳಿದ್ದಾನೆ. ತಾಯಿ ಹಣ ಕೊಟ್ಟಿಲ್ಲ ಎಂದು ಸಿಟ್ಟಿಗೆದ್ದು ಬರ್ಬರವಾಗಿ ಹತ್ಯೆಗೈದಿದ್ದಾನೆ.
ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸಿದ್ದಾರೆ.