30 ಕೋಟಿ ಆಸ್ತಿ ಇದ್ದರೂ ತುತ್ತು ಅನ್ನ ಹಾಕದ ಮಗ; ವಿಷ ಸೇವಿಸಿ ದಂಪತಿ ಸಾವು

ಹರಿಯಾಣ: ಹರಿಯಾಣದಲ್ಲಿ ವೃದ್ಧ ದಂಪತಿ ಮಾರ್ಚ್ 29ರ ರಾತ್ರಿ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಕುಟುಂಬ ಸದಸ್ಯರಿಂದ ದೌರ್ಜನ್ಯಕ್ಕೆ ಒಳಗಾಗಿದ್ದುದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡೆತ್​ನೋಟ್​ ಬರೆದಿದ್ದಾರೆ.

ಜಗದೀಶ್ ಚಂದ್ರ ಆರ್ಯ (78) ಮತ್ತು ಭಗ್ಲಿ ದೇವಿ (77) ಅವರು ಚಾರ್ಖಿ ದಾದ್ರಿಯ ಬದ್ರಾದ ಶಿವ ಕಾಲೋನಿಯಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 30 ಕೋಟಿ ಆಸ್ತಿ ಹೊಂದಿರುವ ತಮ್ಮ ಮಗ ಎರಡು ಹೊತ್ತಿನ ಊಟವನ್ನೂ ನೀಡಲು ನಿರಾಕರಿಸಿದ್ದಾನೆ ಎಂದು ನೊಂದು ಈ ಹಾದಿ ಹಿಡಿದಿದ್ದಾರೆ.

ವಿಷ ಸೇವಿಸುವ ಮುನ್ನ ನಿಯಂತ್ರಣ ಕೊಠಡಿಗೆ ಕರೆ ಮಾಡಿದ ವೃದ್ಧ ದಂಪತಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ದಂಪತಿ ತಮ್ಮ ಇನ್ನೊಬ್ಬ ಮಗ ಮಹೇಂದರ್‌ನೊಂದಿಗೆ ಬಾಧ್ರಾದಲ್ಲಿ ವಾಸಿಸುತ್ತಿದ್ದರು. ಆದರೆ ಆರು ವರ್ಷಗಳ ಹಿಂದೆ ಅವರು ನಿಧನರಾದಾಗ ತಮ್ಮ ಸೊಸೆ ನೀಲಂ ಅವರೊಂದಿಗೆ ವಾಸಿಸಲು ಪ್ರಾರಂಭಿಸಿದ್ದರು. ಆದರೆ ಸೊಸೆ ಇವರನ್ನು ವೃದ್ಧಾಶ್ರಮದಲ್ಲಿ ಇರಿಸಿದ್ದರು. 30 ಕೋಟಿ ರೂ. ಆಸ್ತಿ ಇರುವ ಇನ್ನೊಬ್ಬ ಮಗ ಊಟವನ್ನೂ ಹಾಕುತ್ತಿರಲಿಲ್ಲ. ಇದರಿಂದ ನೊಂದು ದಂಪತಿ ಹೀಗೆ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read