ಪ್ರಯಾಣಿಕರೇ ಗಮನಿಸಿ: ಕೆಲ ರೈಲುಗಳ ಸಂಚಾರ ತಾತ್ಕಾಲಿಕ ರದ್ದು

ಬೆಂಗಳೂರು: ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಬೆಳ್ಳಂದೂರು ಯಾರ್ಡ್ ಪುನರ್ ನಿರ್ಮಾಣಕ್ಕೆ ಇಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ.

ಡಿ. 5 ರಂದು ಯಶವಂತಪುರ -ಹೊಸೂರು ಮೆಮು(06203) ರೈಲು  ರದ್ದುಗೊಳ್ಳಲಿದೆ.

ಡಿ. 5 ರಂದು ಕೊಯಮತ್ತೂರು -ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್ ಪ್ರೆಸ್ ವಿಶೇಷ ರೈಲು(11014) ಮಾರ್ಗ ಮಧ್ಯದಲ್ಲಿ 90 ನಿಮಿಷ ನಿಲ್ಲಲಿದೆ.

ಯಶವಂತಪುರ -ಹೊಸೂರು ಮೆಮು ವಿಶೇಷ ರೈಲು(06393) ಮಾರ್ಗ ಮಧ್ಯದಲ್ಲಿ 60 ನಿಮಿಷ, ಯಶವಂತಪುರ -ಸೇಲಂ ಎಕ್ಸ್ ಪ್ರೆಸ್ ರೈಲು(16211) ಮಾರ್ಗ ಮಧ್ಯದಲ್ಲಿ 10 ನಿಮಿಷಗಳ ಕಾಲ ನಿಲ್ಲಲಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read