ಪ್ರಯಾಣಿಕರೇ ಗಮನಿಸಿ: ಇಂದಿನಿಂದ ಕೆಲ ರೈಲುಗಳ ಸಮಯದಲ್ಲಿ ಬದಲಾವಣೆ

ಮೈಸೂರು ವಿಭಾಗದ ರೈಲುಗಳ ಸಮಯದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, 2025ರ ಜನವರಿ 1 ರಿಂದ ಜಾರಿಗೆ ಬರಲಿದೆ.

ಪ್ರಯಾಣಿಕರು ತಮ್ಮ ಪ್ರಯಾಣದ ಯೋಜನೆ ಮಾಡುವ ಮುನ್ನ ಈ ಬದಲಾವಣೆಗಳನ್ನು ಗಮನಿಸಬೇಕು. ಈ ಬದಲಾವಣೆಗಳಿಂದ ರೈಲು ಸಂಚಾರದ ಸುಗಮತೆ ಮತ್ತು ಸಮಯ ಪಾಲನೆ ಸುಧಾರಿಸಲಾಗುವುದು.

ಬದಲಾದ ಪ್ರಮುಖ ರೈಲುಗಳ ವಿವರ ಹೀಗಿವೆ. ಟ್ರೈನ್ ಸಂಖ್ಯೆ 12649 ಯಶವಂತಪುರ-ಹಜರತ್ ನಿಜಾಮುದ್ದೀನ್ ಎಕ್ಸ್‍ಪ್ರೆಸ್(ಎಸ್.ಕೆ ಎಕ್ಸ್‍ಪ್ರೆಸ್):ದಾವಣಗೆರೆ ನಿಲ್ದಾಣ: ಹೊಸ ಆಗಮನ/ನಿಗರ್ಮನ ಸಮಯ: 17:08/17:10, ಹಳೆಯ ಸಮಯ: 17:50/17:52 ಇದು ಜನವರಿ 1, 2025 ರಿಂದ ಜಾರಿಗೆ ಬರಲಿದೆ.

ಟ್ರೈನ್ ಸಂಖ್ಯೆ 20656 ಹುಬ್ಬಳ್ಳಿ-ಯಶವಂತಪುರ ಸೂಪರ್ ಫಾಸ್ಟ್ ಎಕ್ಸ್‍ಪ್ರೆಸ್: ದಾವಣಗೆರೆ ನಿಲ್ದಾಣ: ಹೊಸ ಆಗಮನ/ನಿಗಮಣ ಸಮಯ: 13:20/13:22, ಹಳೆಯ ಸಮಯ: 13:45/13:47 ಈ ಬದಲಾವಣೆ ಜನವರಿ 4, 2025 ರಿಂದ ಜಾರಿಗೆ ಬರುತ್ತದೆ.

ಟ್ರೈನ್ ಸಂಖ್ಯೆ 06243/56519 ಬೆಂಗಳೂರು-ಹೋಷಪೇಟೆ ಪ್ಯಾಸೆಂಜರ್: ಚಿಕ್ಕಜಾಜೂರು ನಿಲ್ದಾಣ: ಹೊಸ ಸಮಯ: 10:05/10:10, ಹಳೆಯ ಸಮಯ: 10:07/10:10 – ಜನವರಿ 1, 2025 ರಿಂದ ಈ ಬದಲಾವಣೆ ಜಾರಿಯಲ್ಲಿರುತ್ತದೆ.

ಟ್ರೈನ್ ಸಂಖ್ಯೆ 07377 ಬಿಜಾಪುರ-ಮಂಗಳೂರು ಎಕ್ಸ್‍ಪ್ರೆಸ್: ದಾವಣಗೆರೆ ನಿಲ್ದಾಣ: ಹೊಸ ಆಗಮನ/ನಿರ್ಗಮನ ಸಮಯ: 23:43/23:45, ಹಳೆಯ ಸಮಯ: 23:55/23:57, ಚಿಕ್ಕಜಜೂರು ನಿಲ್ದಾಣ: – ಹೊಸ ಸಮಯ: 00:20/00:22, ಹಳೆಯ ಸಮಯ: 00:40/00:42,

ಟ್ರೈನ್ ಸಂಖ್ಯೆ 17348 ಚಿತ್ರದುರ್ಗ-ಹುಬ್ಬಳ್ಳಿ ಎಕ್ಸ್‍ಪ್ರೆಸ್ ಈ ರೈಲು ಹಲವಾರು ಮಧ್ಯದ ನಿಲ್ದಾಣಗಳಲ್ಲಿ ಬದಲಾದ ಸಮಯದೊಂದಿಗೆ ಸಂಚರಿಸುತ್ತದೆ. ಚಿತ್ರದುರ್ಗ:- ಹೊಸ ಸಮಯ: 13:40, – ಹಳೆಯ ಸಮಯ: 14:00, ಹಳಿಯೂರು, ಹೊಸ ಸಮಯ: 13:45/13:46 – ಹಳೆಯ ಸಮಯ: 14:09/14:11, ಬೆಟ್ಟದನಗನಹಳ್ಳಿ ಹಾಲ್ಟ್, ಹೊಸ ಸಮಯ: 13:52/13:53, ಹಳೆಯ ಸಮಯ: 14:15/14:16, ಅಮೃತಾಪುರ, ಹೊಸ ಸಮಯ: 13:58/13:59, – ಹಳೆಯ ಸಮಯ: 14:23/14:24, ಚಿಕ್ಕಂದವಾಡಿ ಹಾಲ್ಟ್, ಹೊಸ ಸಮಯ: 14:05/14:06,  ಹಳೆಯ ಸಮಯ: 14:30/14:31, ದಾವಣಗೆರೆ: – ಹೊಸ ಸಮಯ: 15:21/15:23 – ಹಳೆಯ ಸಮಯ: 16:10/16:12,

ಟ್ರೈನ್ ಸಂಖ್ಯೆ 07339 ಹುಬ್ಬಳ್ಳಿ-ಬೆಂಗಳೂರು ಎಕ್ಸ್‍ಪ್ರೆಸ್, ದಾವಣಗೆರೆ ನಿಲ್ದಾಣ, ಹೊಸ ಸಮಯ: 01:10/01:12,   ಹಳೆಯ ಸಮಯ: 01:33/01:35 ಈ ಬದಲಾವಣೆ ಜನವರಿ 1, 2025 ರಿಂದ ಜಾರಿಗೆ ಬರಲಿದೆ.

ಪ್ರಯಾಣಿಕರಿಗೆ ಸೂಚನೆ: ಈ ಬದಲಾವಣೆಗಳಿಂದ ರೈಲು ಸಂಚಾರವನ್ನು ಇನ್ನಷ್ಟು ಸಮರ್ಪಕಗೊಳಿಸಲು ಮತ್ತು ಪ್ರಯಾಣಿಕರ ಅನುಕೂಲತೆಗಳಿಗೆ ಅನುಗುಣವಾಗಿ ಬದಲಾವಣೆಗಳನ್ನು ತಂದುಕೊಳ್ಳಲಾಗಿದೆ. ಹೊಸ ವೇಳಾಪಟ್ಟಿಯನ್ನು ರೈಲು ನಿಲ್ದಾಣಗಳಲ್ಲಿ ಅಥವಾ ಅಧಿಕೃತ ವೆಬ್‍ಸೈಟ್‍ಗಳಲ್ಲಿ ಪರಿಶೀಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read