ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ಸಾಫ್ಟ್ವೇರ್ ಉದ್ಯೋಗಿ ಅಸಲಿಯತ್ತು

ಬೆಂಗಳೂರು: ಕೈತುಂಬ ಸಂಬಳ ಇರುವ ಸಾಫ್ಟ್ವೇರ್ ಉದ್ಯೋಗಿ ವೃದ್ಧೆ ಮೇಲೆ ಹಲ್ಲೆ ನಡೆಸಿ ಚಿನ್ನದ ಸರ ದೋಚಿ ಜೈಲು ಸೇರಿದ್ದಾನೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಶೋಭಾ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದ ಶ್ರೀಧರ್ ಬಂಧಿತತ ಆರೋಪಿ. ಇದೇ ಅಪಾರ್ಟ್ಮೆಂಟ್ ನಲ್ಲಿ ಅನ್ನಪೂರ್ಣಮ್ಮ ತಮ್ಮ ಪತಿಯೊಂದಿಗೆ ವಾಸವಾಗಿದ್ದಾರೆ. ಅವರು ಮನೆಯಲ್ಲಿ ಒಂಟಿಯಾಗಿದ್ದ ಸಂದರ್ಭದಲ್ಲಿ ಅಪರಿಚಿತನ ಸೋಗಿನಲ್ಲಿ ಮನೆಗೆ ಬಂದ ಶ್ರೀಧರ್ ಕುಡಿಯಲು ನೀರು ಕೇಳಿದ್ದು, ನೀರು ತರಲು ಅನ್ನಪೂರ್ಣಮ್ಮ ಒಳಗೆ ಹೋಗುತ್ತಿದ್ದಂತೆ ಹಿಂದಿನಿಂದ ಬಂದು ಹಲ್ಲೆ ಮಾಡಿ 80 ಗ್ರಾಂ ಚಿನ್ನದ ಸರ ದೋಚಿ ಪರಾರಿಯಾಗಿದ್ದಾನೆ.

ತನಿಖೆ ಕೈಗೊಂಡ ಪೊಲೀಸರು ಪಕ್ಕದ ಪ್ಲಾಟ್ ನಿವಾಸಿ ಶ್ರೀಧರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅಡ್ಡ ದಾರಿ ಹಿಡಿದು ಸಾಲದ ಸುಳಿಗೆ ಸಿಲುಕಿದ್ದ ಶ್ರೀಧರ ವೃದ್ಧೆ ಮೇಲೆ ಮರಣಾಂತಿಕ ಹಲ್ಲೆ ಮಾಡಿ ಸರ ದೋಚಿರುವುದು ಗೊತ್ತಾಗಿದೆ. ಆರೋಪಿಯನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅನ್ನಪೂರ್ಣಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪಾರಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read