ಯೂಟ್ಯೂಬ್ ವೀವ್ಸ್ ಗಾಗಿ ‘ಸೋಡಿಯಂ ಸ್ಪೋಟ’ : ಡ್ರೋನ್ ಪ್ರತಾಪ್ ಗೆ ಎದುರಾಯ್ತು ಸಂಕಷ್ಟ.!

ಬೆಂಗಳೂರು : ಕೃಷಿ ಹೊಂಡದಲ್ಲಿ ‘ಸೋಡಿಯಂ ಸ್ಪೋಟ’ ಮಾಡಿದ ಡ್ರೋನ್ ಪ್ರತಾಪ್ ಗೆ ಸಂಕಷ್ಟ ಎದುರಾಗಿದ್ದು, ಎಫ್ ಐ ಆರ್ ದಾಖಲಾಗಿದೆ.ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಠಾಣೆ ಪೊಲೀಸರು ಡ್ರೋನ್ ಪ್ರತಾಪ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಡಿಗೇಶಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಎಫ್ಐಆರ್ ದಾಖಲಿಸಿದ ಪೊಲೀಸರು ಡ್ರೋನ್ ಪ್ರತಾಪ್ ನನ್ನು ಬಂಧಿಸಿದ್ದಾರೆ.

ಯೂಟ್ಯೂಬ್ ವೀವ್ಸ್ ಗಾಗಿ ‘ಸೋಡಿಯಂ ಸ್ಪೋಟ’

ಪ್ರಯೋಗದ ಹೆಸರಿನಲ್ಲಿ ನೀರಿಗೆ ಸೋಡಿಯಂ ಹಾಕಿ ಬ್ಲಾಸ್ಟ್ ಮಾಡಿದ್ದರು. ಭಾರೀ ಸ್ಪೋಟದೊಂದಿಗೆ ನೀರು ಚಿಮ್ಮಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಭಾರಿ ವೈರಲ್ ಆಗಿತ್ತು. ಇದಕ್ಕೆ ಪರಿಸರ ಪ್ರೇಮಿಗಳು ಸೇರಿ ವಿವಿಧ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.ವಿಜ್ಞಾನದ ಪ್ರಯೋಗದ ಹೆಸರಿನಲ್ಲಿ ವಿಡಿಯೋವೊಂದನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನೀರಿಗೆ ಸೋಡಿಯಮ್ ಕೆಮಿಕಲ್ ಹಾಕಿ ನೀರಿನಾಳದಲ್ಲಿ ಬ್ಲಾಸ್ಟ್ ಮಾಡಿದ್ದಾರೆ. ಕೆಮಿಕಲ್ ಹಾಕಿದ್ದಾಗ ನೀರಿನಲ್ಲಿ ಬಾಂಬ್ ಬ್ಲಾಸ್ಟ್ ತರ ಸ್ಪೋಟವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಭಾರಿ ವೈರಲ್ ಆಗಿದೆ.

 

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read