ನಾಗಚೈತನ್ಯ ಜೊತೆಗಿನ ಡೇಟಿಂಗ್ ವದಂತಿ; ಪ್ರತಿಕ್ರಿಯಿಸಿದ ನಟಿ ಸೋಭಿತಾ

ತೆಲುಗು ನಟ ನಾಗ ಚೈತನ್ಯ ಜೊತೆಗಿನ ಡೇಟಿಂಗ್ ವದಂತಿಗಳ ಬಗ್ಗೆ ನಟಿ ಸೋಭಿತಾ ಧೂಳಿಪಾಲ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ.

ಸೋಭಿತಾ ನಟನೆಯ ಇತ್ತೀಚೆಗೆ ಬಿಡುಗಡೆಯಾದ ʼಪೊನ್ನಿಯಿನ್ ಸೆಲ್ವನ್ 2ʼ ಚಿತ್ರದ ಮಾಧ್ಯಮ ಸಂವಾದದ ಸಂದರ್ಭದಲ್ಲಿ ನಾಗ ಚೈತನ್ಯ ಅವರೊಂದಿಗಿನ ಸಂಬಂಧದ ಬಗ್ಗೆ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಸೋಭಿತಾ ಪ್ರಸ್ತುತ ತನ್ನ ವೃತ್ತಿಜೀವನದತ್ತ ಗಮನಹರಿಸಿದ್ದೇನೆ ಎಂದು ಹೇಳಿದ್ದಾರೆ.

ತಿಳಿವಳಿಕೆ ಇಲ್ಲದೆ ರೂಮರ್ ಹಬ್ಬಿಸುವ ಜನರಿಗೆ ಉತ್ತರವನ್ನು ನೀಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು. ನಾನು ಇದೀಗ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಿದ್ದೇನೆ. ಜ್ಞಾನವಿಲ್ಲದೆ ಮಾತನಾಡುವ ಜನರಿಗೆ, ನಾನು ಉತ್ತರಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಯಾವುದೇ ತಪ್ಪು ಮಾಡದಿರುವಾಗ ಮತ್ತು ಅದು ನನ್ನ ವ್ಯವಹಾರವಲ್ಲದಿದ್ದಾಗ ವಿಷಯಗಳನ್ನು ಸ್ಪಷ್ಟಪಡಿಸುವ ಅವಶ್ಯಕತೆ ಇಲ್ಲ. ಜನರು ಸಾಮಾನ್ಯವಾಗಿ ಅರೆಬೆಂದ ಸತ್ಯಗಳನ್ನು ಬರೆಯುತ್ತಾರೆ, ಆದ್ದರಿಂದ ಸ್ಪಷ್ಟೀಕರಣಗಳನ್ನು ನೀಡುವ ಬದಲು ಶಾಂತವಾಗಿರಲು ಮತ್ತು ತನ್ನ ಜೀವನದ ಮೇಲೆ ಕೇಂದ್ರೀಕರಿಸಲು ಬಯಸುತ್ತೇನೆ ಎಂದು ಸೋಭಿತಾ ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read