ಕಣ್ತುಂಬಿಕೊಳ್ಳಿ ನಂದಿಬೆಟ್ಟದ ಪ್ರಕೃತಿ ಸೊಬಗು

ಬೆಂಗಳೂರಿನಿಂದ ಯಲಹಂಕ ಮಾರ್ಗವಾಗಿ ದೇವನಹಳ್ಳಿಯ ಕಡೆಗೆ 60 ಕಿಲೋ ಮೀಟರ್ ದೂರದಲ್ಲಿ ನಂದಿ ಬೆಟ್ಟ ಇದೆ.

ಇದನ್ನು ಬಡವರ ಮಸ್ಸೂರಿ ಎಂದೇ ಕರೆಯುತ್ತಾರೆ. ನಂದಿಬೆಟ್ಟದ ಪ್ರಕೃತಿ ಸೊಬಗನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.

ಎತ್ತರದ ಪ್ರದೇಶದಲ್ಲಿರುವ ನಂದಿಬೆಟ್ಟ ನವದಂಪತಿಗಳಿಗೆ, ಪ್ರೇಮಿಗಳಿಗೆ ಹೇಳಿ ಮಾಡಿಸಿದ ತಾಣ. ಇಂತಹ ರಮಣೀಯ ಸ್ಥಳದ ಸೊಬಗನ್ನು ಸವಿಯುವಾಗ ಹೊತ್ತು ಕಳೆದಿದ್ದೆ ಗೊತ್ತಾಗುವುದಿಲ್ಲ. ಸಮುದ್ರದ ಮಟ್ಟದಿಂದ ಸುಮಾರು 1455 ಮೀಟರ್ ಎತ್ತರದಲ್ಲಿರುವ ನಂದಿಬೆಟ್ಟಕ್ಕೆ ಹೋಗುವುದೇ ಚೆಂದ. ಟಿಪ್ಪುಸುಲ್ತಾನ್ ಕಾಲದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ನಂದಿಬೆಟ್ಟಕ್ಕೆ ಕರೆತರಲಾಗುತ್ತಿತ್ತು. ಇಲ್ಲಿರುವ ಬೆಟ್ಟದ ತುದಿಯಿಂದ ಅವರನ್ನು ಕೆಳಕ್ಕೆ ನೂಕಲಾಗುತ್ತಿತ್ತು.

ಹಾಗಾಗಿ ಇಲ್ಲಿನ ಒಂದು ಸ್ಥಳಕ್ಕೆ ಟಿಪ್ಪು ಡ್ರಾಪ್ ಎಂದು ಕರೆಯುತ್ತಾರೆ. ಬೇಸಿಗೆ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಹೆಚ್ಚಿನ ಸಮಯವನ್ನು ನಂದಿಬೆಟ್ಟದಲ್ಲಿ ಕಳೆಯುತ್ತಿದ್ದ ಎನ್ನಲಾಗಿದೆ. ಬ್ರಿಟೀಷರ ಆಡಳಿತದಲ್ಲಿಯೂ ಇದು ಬೇಸಿಗೆಯ ತಂಗುದಾಣವಾಗಿತ್ತು. ಸಾಧ್ಯವಾದರೆ ಒಮ್ಮೆ ನಂದಿಬೆಟ್ಟಕ್ಕೆ ಹೋಗಿಬನ್ನಿ. ಅಲ್ಲಿನ ಸೊಬಗನ್ನು ಸವಿಯಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read