ತೆಲಂಗಾಣದ ಜಗಿತ್ಯಾಲ್ ಜಿಲ್ಲೆಯಲ್ಲಿ ಬಿಯರ್ ಕ್ಯಾನ್ ಒಳಗೆ ಹಾವು ಸಿಕ್ಕಿಬಿದ್ದ ಘಟನೆ ನಡೆದಿದೆ. ಬಿಯರ್ ಕ್ಯಾನ್ ನಲ್ಲಿ ಅದ್ರ ತಲೆ ಸಿಕ್ಕಿಬಿದ್ದ ನಂತ್ರ ಅದ್ರಿಂದ ತಪ್ಪಿಸಿಕೊಳ್ಳಲು ಹಾವು ಸಾಕಷ್ಟು ಪ್ರಯತ್ನ ನಡೆಸಿದೆ. ಸತತ ಮೂರು ಗಂಟೆಗಳ ಪ್ರಯತ್ನದ ನಂತ್ರ ಹಾವು ಬಿಯರ್ ಬಾಟಲಿಯಿಂದ ತಲೆಯನ್ನು ತೆಗೆಯಲು ಯಶಸ್ವಿಯಾಗಿದೆ.
ನಲ್ಲಗೊಂಡ ಪ್ರದೇಶದ ರೈತ ವೇದಿಕೆ ಮೈದಾನದಲ್ಲಿ ಈ ಘಟನೆ ನಡೆದಿದೆ. ಹಾವು, ಬಿಯರ್ ಬಾಟಲಿಯಿಂದ ತಲೆಯನ್ನು ಹೊರಗೆ ತೆಗೆಯಲು ಸತತ ಪ್ರಯತ್ನ ಮಾಡಿದೆ. ಕೊನೆಯಲ್ಲಿ ಮುಳ್ಳಿನ ಪೊದೆಗೆ ಹೋಗಿ ಅದು ಅಲ್ಲಿ ಬಿಯರ್ ಬಾಟಲಿಯನ್ನು ತೆಗೆದಿದೆ.
ಈ ಘಟನೆಯ ಸಂಪೂರ್ಣ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ತ್ಯಾಜ್ಯ ವಸ್ತುಗಳನ್ನು ಕಂಡ ಕಂಡಲ್ಲಿ ಎಸೆಯುವ ಕಾರಣ ಪ್ರಾಣಿ, ಸರೀಸೃಪಗಳು ಬಲಿಯಾಗ್ತಿವೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾವು ಹೇಗೆ ಬಿಯರ್ ಬಾಟಲಿಯೊಳಗೆ ಸೇರಿಕೊಂಡಿತು ಎನ್ನುವ ಮಾಹಿತಿ ಇಲ್ಲ. ವ್ಯಕ್ತಿಯೊಬ್ಬರು ಕೋಲನ್ನು ಹಿಡಿದು ಹಾವನ್ನು ರಕ್ಷಿಸುವ ಪ್ರಯತ್ನ ನಡೆಸುತ್ತಿದ್ದಾರೆ.
https://twitter.com/ChotaNewsTelugu/status/1824329009246703793?ref_src=twsrc%5Etfw%7Ctwcamp%5Etweetembed%7Ctwterm%5E1824329009246703793%7Ctwgr%5E9703c5a3f95e06472afd1e1d7094980b9f7b91ed%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Ftelanganavideosnakestrugglesfor3hourstofreeitsheadfrombeercanmanagestorescueitself-newsid-n626813670