ಕ್ರಿಕೆಟ್ ಪಂದ್ಯದ ವೇಳೆಯಲ್ಲೇ ಮೈದಾನಕ್ಕೆ ಎಂಟ್ರಿ ಕೊಟ್ಟ ಹಾವು: ವಿಡಿಯೋ ವೈರಲ್

ಕೊಲಂಬೊ: ಪ್ರಸ್ತುತ ನಡೆಯುತ್ತಿರುವ ಲಂಕಾ ಪ್ರೀಮಿಯರ್ ಲೀಗ್(ಎಲ್‌ಪಿಎಲ್) ನಲ್ಲಿ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಸೋಮವಾರ ಗಾಲೆ ಟೈಟಾನ್ಸ್ ವಿರುದ್ಧ ಡಂಬುಲ್ಲಾ ಔರಾ ಮುಖಾಮುಖಿಯಾಗಿದ್ದು, ಪಿಚ್‌ ಗೆ ಹಾವು ನುಗ್ಗಿದ ಕಾರಣ ಸ್ವಲ್ಪ ಸಮಯದವರೆಗೆ ಪಂದ್ಯ ಸ್ಥಗಿತಗೊಳಿಸಲಾಯಿತು.

ದಂಬುಲ್ಲಾ ಔರಾ ಅವರ 181 ರನ್ ಚೇಸ್‌ ನ ನಾಲ್ಕನೇ ಓವರ್‌ನ ನಂತರ ಈ ಘಟನೆ ಸಂಭವಿಸಿದೆ. ಗಾಲೆ ಟೈಟಾನ್ಸ್‌ನ ಶಕೀಬ್ ಅಲ್ ಹಸನ್ ತಮ್ಮ ಮೊದಲ ಓವರ್ ಅನ್ನು ಪ್ರಾರಂಭಿಸಲು ಮುಂದಾದಾಗ ಬೌಂಡರಿ ಹಗ್ಗಗಳ ಅಂಚಿನಲ್ಲಿ ಹಾವು ಹರಿದಾಡುತ್ತಿರುವುದನ್ನು ಕಂಡು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕೆಲ ಸಮಯ ಪಂದ್ಯ ನಿಲ್ಲಿಸಲಾಗಿದೆ. ಕೆಲ ಕಾಲ ಆತಂಕ ಮೂಡಿದ್ದು, ನಂತರ ಆಟ ಮುಂದುವರೆಸಲಾಗಿದೆ. ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.

https://twitter.com/mufaddal_vohra/status/1685991231476858886

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read