ಏಕದಿನ ಕ್ರಿಕೆಟ್ ನಲ್ಲಿ ನಾಲ್ಕು ಸಾವಿರ ರನ್ ಪೂರೈಸಿದ ಸ್ಮೃತಿ ಮಂದಾನ

ಇತ್ತೀಚೆಗಷ್ಟೇ ನಡೆದ ಭಾರತ ಹಾಗೂ ಐರ್ಲೆಂಡ್ ನಡುವಣ ಮಹಿಳಾ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಸ್ಮೃತಿ ಮಂದಾನ ನಾಲ್ಕು ಸಾವಿರಗಳ ರನ್ಗಳ ಗಡಿ ಮುಟ್ಟಿದ್ದಾರೆ. ಈ ಮೂಲಕ ಮಹಿಳಾ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್ ನಲ್ಲಿ ಅತಿ ವೇಗವಾಗಿ ನಾಲ್ಕು ಸಾವಿರ ರನ್ ಗಳಿಸಿರುವ ಮೂರನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ  ಪಾತ್ರರಾಗಿದ್ದಾರೆ.

ಭಾರತ ಹಾಗೂ ಐರ್ಲೆಂಡ್ ನಡುವೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ತಂಡ 7 ವಿಕೆಟ್ ನಷ್ಟಕ್ಕೆ 237  ರನ್  ದಾಖಲಿಸಿದ್ದು,  ಈ ಪಂದ್ಯದಲ್ಲಿ ಮಹಿಳಾ ಭಾರತ ತಂಡ ಆರು ವಿಕೆಟ್ ಗಳಿಂದ ಭರ್ಜರಿ ಜಯ ಸಾಧಿಸಿದೆ. ಸ್ಮೃತಿ ಮಂದಾನ ಅವರಿಗೆ 4000 ರನ್ಗಳ ಗಡಿ ಮುಟ್ಟಲು  ಕೇವಲ 40 ರನ್ ಗಳು ಬೇಕಾಗಿತ್ತು. ಅಂದುಕೊಂಡಂತೆ ಈ ದಾಖಲೆ ಬರೆದು 41 ರನ್ಗಳಿಗೆ ತಮ್ಮ ವಿಕೆಟ್ ಒಪ್ಪಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read