‘ಅಯ್ಯೋ ಶ್ರದ್ಧಾʼ ರನ್ನು ಭೇಟಿಯಾದ ಸ್ಮೃತಿ ಇರಾನಿ: ನೆಟ್ಟಿಗರ ಮನಗೆದ್ದ ಫೋಟೋ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿದ್ದಾರೆ. ಇತ್ತೀಚೆಗೆ ಅವರು ಹಾಸ್ಯನಟಿ ಶ್ರದ್ಧಾ ಅವರೊಂದಿಗೆ ಸೆಲ್ಫಿಗಳ ಸರಣಿಯನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರೂ ಒಂದೇ ರೀತಿಯಲ್ಲಿ ವಿಧ ವಿಧ ಮುಖ ಚಹರೆ ಮಾಡಿಕೊಂಡು ಫೋಟೋ ತೆಗೆಸಿಕೊಂಡಿದ್ದಾರೆ.

ಪೋಸ್ಟ್ ತ್ವರಿತವಾಗಿ ವೈರಲ್ ಆಗಿದ್ದು, ಇನ್​ಸ್ಟಾಗ್ರಾಮ್​ ಬಳಕೆದಾರರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸ್ಮೃತಿ ಇರಾನಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ಗಳಿಗೆ ಹೆಸರುವಾಸಿಯಾಗಿದ್ದಾರೆ ಮತ್ತು ಶ್ರದ್ಧಾ ಅವರೊಂದಿಗಿನ ಈ ಫೋಟೋಗಳು ಅವರ ಅಭಿಮಾನಿಗಳ ಸಂತೋಷವನ್ನು ಹೆಚ್ಚಿಸಿದೆ.

ಇನ್​ಸ್ಟಾಗ್ರಾಮ್​ ಪೋಸ್ಟ್ 50 ಸಾವಿರಕ್ಕೂ ಅಧಿಕ ಲೈಕ್‌ಗಳನ್ನು ಸಂಗ್ರಹಿಸಿದೆ. ಸ್ಮೃತಿ ಇರಾನಿ ಅವರು “ಹಮ್ ಹೈ ಕಲ್ ಆಜ್ ಔರ್ ಕಲ್” ಎಂಬ ಟಿವಿ ಶೋ ಮೂಲಕ ಮನರಂಜನಾ ಉದ್ಯಮದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಜನಪ್ರಿಯ ಟಿವಿ ಸರಣಿ “ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ” ನಲ್ಲಿ ತುಳಸಿ ಪಾತ್ರದೊಂದಿಗೆ ಹೆಸರಾಗಿದ್ದರು. ಕೇಂದ್ರ ಸಚಿವೆಯಾಗಿಯೂ ಸಹ, ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ಜವಳಿ ಸಚಿವಾಲಯ ಸೇರಿದಂತೆ ಸರ್ಕಾರದಲ್ಲಿ ಹಲವಾರು ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ.

ಅದೇ ರೀತಿ ಶ್ರದ್ಧಾ, ಅಯ್ಯೋ ಶ್ರದ್ಧಾ ಎಂಬ ಹಾಸ್ಯ ಸರಣಿಯ ಮೂಲಕ ಎಲ್ಲರ ಮನ ಗೆಲ್ಲುತ್ತಿದ್ದಾರೆ. ಇತ್ತೀಚೆಗೆ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನೂ ಭೇಟಿಯಾಗಿದ್ದರು, ಇದರ ಫೋಟೋಗಳೂ ವೈರಲ್​ ಆಗಿದ್ದವು.

Smriti Irani goes 'Aiyyo' as she shares a selfie with comedian Shraddha  Jain; drops a message for 'all the sassy saas & conniving bahus' - Times of  India

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read