ಭಾನುವಾರದ ಮೇಲೆ ಬಿದ್ದ ಕೆಟ್ಟ ದೃಷ್ಟಿಯನ್ನು ತೆಗೆಯಲು ಹೀಗೆ ಮಾಡಿದರು ಸ್ಮೃತಿ ಇರಾನಿ…!

ಸಾಮಾನ್ಯವಾಗಿ ಭಾನುವಾರದ ಬಹುತೇಕ ದಿನ ನೋಡ ನೋಡುತ್ತಿದ್ದಂತೆಯೇ ಮಾಯವಾಗಿಬಿಡುತ್ತದೆ ಎಂದು ಬಹುತೇಕರಿಗೆ ಅನಿಸುತ್ತದೆ. ಭಾನುವಾರ ಹಾಗೂ ಸೋಮವಾರದ ನಡುವೆ ಮತ್ತೊಂದು ದಿನವಿರಬೇಕಿತ್ತು ಎಂದು ನಮ್ಮಲ್ಲಿ ಬಹುತೇಕರಿಗೆ ಅನಿಸುತ್ತದೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹ ಇಂಥದ್ದೇ ವರ್ಗಕ್ಕೆ ಸೇರಿದ್ದಾರೆ. ನಮ್ಮೆಲ್ಲರ ಆಶಯ ಈಡೇರಲಿ ಎಂಬಂತೆ, ಈ ವಿನೋದಮಯ ಪೋಸ್ಟ್ ಒಂದನ್ನು ಸ್ಮೃತಿ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ.

“ನಿಮ್ಮ ಭಾನುವಾರವು ಸೋಮವಾರವಾಗದೇ ಇರಲಿ ಎಂದು ದೃಷ್ಟಿ ತೆಗೆಯಬೇಕೆನಿಸಿದಾಗ,” ಎಂದು ಬರೆದ ಸ್ಮೃತಿ, ದೃಷ್ಟಿ ತೆಗೆಯುವಂತೆ ಇರುವ ತಮ್ಮದೇ ಚಿತ್ರವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಈ ಪೋಸ್ಟ್‌ಗೆ #dheereseaanabagiyanmeinMonday ಎಂದು ಹ್ಯಾಶ್‌ಟ್ಯಾಗ್ ಸಹ ಹಾಕಿದ್ದಾರೆ ಸ್ಮೃತಿ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read