ಕಲಬುರಗಿ : ತಾಂತ್ರಿಕ ದೋಷದಿಂದ ಹಾಸನ –ಸೋಲಾಪುರ ಎಕ್ಸ್’ಪ್ರೆಸ್ ರೈಲಿನಲ್ಲಿ ಹೊಗೆ ಕಾಣಿಸಿಕೊಂಡು ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾದ ಘಟನೆ ಕಲಬುರಗಿಯ ಶಬಾಬಾದ್ ತಾಲೂಕಿನ ಮರತೂರಿನಲ್ಲಿ ನಡೆದಿದೆ.
ತಾಂತ್ರಿಕ ದೋಷದಿಂದ ರೈಲಿನಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಸಿಗ್ನಲ್ ತೋರಿಸಿ ಸಿಬ್ಬಂದಿಗಳು ರೈಲು ನಿಲ್ಲಿಸಿದ್ದಾರೆ.
ಕೂಡಲೇ ಸಿಬ್ಬಂದಿಗಳು ತಾಂತ್ರಿಕ ದೋಷ ಸರಿಪಡಿಸಿದ್ದು, ನಂತರ ರೈಲು ಹೊರಟಿದೆ. ಹೊಗೆ ಕಾಣಿಸಿಕೊಂಡಿದ್ದರಿಂದ ಕೆಲಕಾಲ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಯಾಗಿತ್ತು.
You Might Also Like
TAGGED:ತಾಂತ್ರಿಕ ದೋಷ