Viral Video: ನಿಯಂತ್ರಣ ತಪ್ಪಿ ಗಾಲ್ಫ್ ಕೋರ್ಸ್ ನಲ್ಲಿ ಲ್ಯಾಂಡ್ ಆದ ಲಘು ವಿಮಾನ; ಸಣ್ಣ ಪುಟ್ಟ ಗಾಯಗಳೊಂದಿಗೆ ಪೈಲೆಟ್ ಪಾರು

ಅಮೆರಿಕಾದಲ್ಲಿ ನಿಯಂತ್ರಣ ತಪ್ಪಿದ ಲಘು ವಿಮಾನ ಒಂದು ಗಾಲ್ಫ್ ಕೋರ್ಸ್ ನಲ್ಲಿ ಕ್ರ್ಯಾಶ್ ಲ್ಯಾಂಡ್ ಆಗಿದ್ದು, ಇದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಅಪಘಾತದಲ್ಲಿ ವಿಮಾನದ ಪೈಲೆಟ್, ಸಣ್ಣಪುಟ್ಟ ಗಾಯಗಳೊಂದಿಗೆ ಜೀವಪಾಯದಿಂದ ಪಾರಾಗಿದ್ದಾನೆ.

ಭಾನುವಾರ ಮುಂಜಾನೆ ಈ ಘಟನೆ ನಡೆದಿದ್ದು, ಮೆಕ್ ಗ್ಲಾನ್ ಏರ್ಪೋರ್ಟ್ ನಿಂದ ಟೇಕಾಫ್ ಆದ ಸಿಂಗಲ್ ಇಂಜಿನ್ ಹೊಂದಿರುವ ಪೈಪರ್ ಪಿಎ 28 ವಿಮಾನ 400 ಅಡಿ ಮೇಲಿರುವಾಗ ನಿಯಂತ್ರಣ ಕಳೆದುಕೊಂಡಿದೆ. ನಂತರ ಸಾಕ್ರೆಮಿಂಟೋ ಪ್ರಾಂತ್ಯದ ಗಾಲ್ಫ್ ಕೋರ್ಸ್ ನಲ್ಲಿ ಲ್ಯಾಂಡ್ ಆಗಿದೆ.

ಈ ಲಘು ವಿಮಾನ ದೊಡ್ಡ ಸದ್ದಿನೊಂದಿಗೆ ಜಾರಿಕೊಂಡು ಗಾಲ್ಫ್ ಕೋರ್ಸ್ ನ ಕೆಫೆಟೇರಿಯಾ ಏರಿಯಾಗೆ ಬಂದಿದ್ದು, ಈ ಸಂದರ್ಭದಲ್ಲಿ ಅಲ್ಲಿ ಯಾರೂ ಇರದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.

ವಿಮಾನ ಕ್ರ್ಯಾಶ್ ಲ್ಯಾಂಡ್ ಆಗುತ್ತಿದ್ದಂತೆ ಅದರ ಪೈಲೆಟ್ ಸಣ್ಣ ಪುಟ್ಟ ಗಾಯಗಳೊಂದಿಗೆ ಆರಾಮಾಗಿ ಅಲ್ಲಿಂದ ನಡೆದುಕೊಂಡು ಹೋದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಲಘು ವಿಮಾನದಲ್ಲಿ ಪೈಲೆಟ್ ಹೊರತುಪಡಿಸಿ ಇತರೆ ಯಾವ ಪ್ರಯಾಣಿಕರು ಸಹ ಇರಲಿಲ್ಲ ಎಂದು ಮೂಲಗಳು ತಿಳಿಸಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read