ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿದ ಎಸ್.ಎಂ. ಕೃಷ್ಣ ಜೀವನ ಕುರಿತು ರಚನೆಯಾದ ಕೃತಿಗಳಿವು

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ(92) ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಲೋಕಸಭೆ, ರಾಜ್ಯಸಭೆ ಸದಸ್ಯರಾಗಿ, ವಿಧಾನಪರಿಷತ್, ವಿಧಾನಸಭೆ ಸದಸ್ಯರಾಗಿ. ಸಚಿವ, ಸ್ಪೀಕರ್, ರಾಜ್ಯದ ಮೊದಲ ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಮುಖ್ಯಮಂತ್ರಿಯಾಗಿ ನೀರಾವರಿ ಯೋಜನೆಗಳು, ಆಧುನಿಕ ಬೆಂಗಳೂರು ನಿರ್ಮಾಣದಲ್ಲಿ ಕೃಷ್ಣ ಪ್ರಮುಖ ಪಾತ್ರ ವಹಿಸಿದ್ದಾರೆ. ಬರಗಾಲ, ಡಾ. ರಾಜಕುಮಾರ್ ಅಪಹರಣ, ಕಾವೇರಿ ಗಲಾಟೆಯಂತಹ ಸವಾಲುಗಳನ್ನು ದಿಟ್ಟವಾಗಿ ಎದುರಿಸಿದ್ದರು.

ರಾಜಕೀಯದಲ್ಲಿ ಎಸ್.ಎಂ. ಕೃಷ್ಣ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.  ಅವರ ಜೀವನ ಕುರಿತಾಗಿ 6 ಕೃತಿಗಳು ರಚನೆಯಾಗಿವೆ.

ಅವರ ಜೀವನ ಚರಿತ್ರೆ ‘ಚಿತ್ರದೀಪ ಸಾಲು’, ಎಸ್.ಎಂ. ಕೃಷ್ಣ ನೆನಪುಗಳ ಸಂಕಲನ ‘ಸ್ಮೃತಿ ವಾಹಿನಿ’, ಜೀವನ ಚರಿತ್ರೆ ‘ಕೃಷ್ಣ ಪಥ’, ಅವರ ಚಿಂತನೆಗಳ ಸಂಕಲನ ‘ಭವಿಷ್ಯ ದರ್ಶನ’, ಇಂಗ್ಲಿಷ್ ಕೃತಿಗಳಾದ ‘ಡೌನ್ ಮೆಮೊರಿ ಲೇನ್’, ‘ಸ್ಟೇಟ್ಸ್ ಮನ್ ಎಸ್.ಎಂ. ಕೃಷ್ಣ’ ಕೃತಿಗಳು ರಚನೆಯಾಗಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read