ಎಸ್.ಎಲ್. ಭೈರಪ್ಪನವರಿಗೆ ಮೋದಿಯವರ ಓಲೈಕೆ ಏಕೆ ಬೇಕು ಎಂದು ಪ್ರಶ್ನಿಸಿದ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್….!

ಖ್ಯಾತ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂದಿದ್ದು, ಈ ಸಂದರ್ಭದಲ್ಲಿ ಮಾತನಾಡುವ ವೇಳೆ, ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದ ಕಾರಣದಿಂದಲೇ ನನಗೆ ಪ್ರಶಸ್ತಿ ಬಂದಿದೆ ಎಂದು ಹೇಳಿದ್ದರು.

ಅಲ್ಲದೆ 2024 ಹಾಗೂ 2029  ರ ಲೋಕಸಭಾ ಚುನಾವಣೆಯಲ್ಲಿಯೂ ಮೋದಿಯವರ ಅಧಿಕಾರಾವಧಿ ಇರಲಿ. ಆ ಬಳಿಕ ಮೋದಿ ನಿವೃತ್ತರಾಗಿ ತಮ್ಮಷ್ಟೇ ಸಮರ್ಥರನ್ನು ನೇಮಿಸಬೇಕು ಎಂದು ಎಸ್.ಎಲ್. ಭೈರಪ್ಪ ಅಭಿಪ್ರಾಯಪಟ್ಟಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್, ಭೈರಪ್ಪನವರಿಗೆ ಪ್ರಶಸ್ತಿ ಬರಲು ಮೋದಿ ಕಾರಣರಲ್ಲ ಬದಲಿಗೆ ಅವರ ಸಾಹಿತ್ಯ ಕೃಷಿ ಕಾರಣಕ್ಕೆ ಇದು ಸಂದಿದೆ. ಈ ವಯಸ್ಸಿನಲ್ಲಿ ಭೈರಪ್ಪನವರಿಗೆ ಓಲೈಕೆ ಏಕೆ ಬೇಕು ಎಂದು ಪ್ರಶ್ನಿಸಿದ್ದಾರೆ.

ಅಲ್ಲದೆ ನೀವು ಬರವಣಿಗೆ ಆರಂಭಿಸಿದಾಗ ಮೋದಿ ಎಲ್ಲಿದ್ದರೆಂಬುದೇ ಗೊತ್ತಿಲ್ಲ. ಮೋದಿಯವರ ಕಾರಣಕ್ಕೆ ಪ್ರಶಸ್ತಿ ಬಂದಿದೆ ಎಂಬ ನಿಮ್ಮ ಹೇಳಿಕೆ ಪ್ರಶಸ್ತಿಗೆ ಅವಮಾನ ಮಾಡಿದಂತೆ ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read