ಮಲ್ಲಿಗೆ ಹೂವಿನಿಂದ ಮಾಡಿ ತ್ವಚೆಯ ‘ಆರೈಕೆ’

ಮಲ್ಲಿಗೆ ಹೂವು ಪರಿಮಳವಷ್ಟೇ ಅಲ್ಲ, ತ್ವಚೆಯನ್ನು ಆರೋಗ್ಯವಾಗಿಡುತ್ತದೆ. ಇವುಗಳಲ್ಲಿರುವ ಔಷಧ ಗುಣಗಳೇ ಇದಕ್ಕೆ ಕಾರಣ. ಬೇಸಿಗೆಯಲ್ಲಿ ಹೆಚ್ಚು ದೊರಕುವ ಮಲ್ಲಿಗೆ ಹೂವಿನಿಂದ ಮುಖದ ಸೌಂದರ್ಯ ಕಾಪಾಡಿಕೊಳ್ಳಬಹುದು. ಅದು ಹೇಗೆ ಅಂತ ನೋಡಿ.

* ಒಂದು ಹಿಡಿ ಮಲ್ಲಿಗೆ ಹೂವು ಮುದ್ದೆಯಾಗಿ ಮಾಡಿ ಅದಕ್ಕೆ 4 ಚಮಚ ಮೊಸರು, 1 ಚಮಚ ಸಕ್ಕರೆ ಕಲಸಿ ಮುಖಕ್ಕೆ ಹಚ್ಚಿಕೊಳ್ಳಬೇಕು. 20 ನಿಮಿಷದ ನಂತರ ಸ್ವಚ್ಛ ಮಾಡಿಕೊಳ್ಳಬೇಕು. ಇದರಿಂದ ಮೃತ ಕಣಗಳು ತೊಲಗಿ ಮುಖದ ಸೌಂದರ್ಯ ಹೆಚ್ಚುತ್ತದೆ.

* ಜಿಡ್ಡು ತ್ವಚೆ ಹೊಂದಿರುವವರು 2 ಚಮಚ ಮಲ್ಲಿಗೆ ಎಣ್ಣೆಗೆ 4 ಚಮಚ ಮೊಸರು, ಮುಲ್ತಾನಿ ಮಣ್ಣು, ಗುಲಾಬಿ ನೀರು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಬೇಕು. ಕನಿಷ್ಠ ವಾರಕ್ಕೊಂದು ಬಾರಿ ಹೀಗೆ ಮಾಡಿಕೊಂಡರೆ ತ್ವಚೆಯ ಗ್ರಂಥಿಗಳಲ್ಲಿ ಜಿಡ್ಡು ಕಡಿಮೆಯಾಗಿ ಮುಖ ಕಾಂತಿಯುತವಾಗುತ್ತದೆ.

* ಒಣಗಿದ ತ್ವಚೆ ಹೊಂದಿರುವವರು 3 ಹನಿ ಮಲ್ಲಿಗೆ ಎಣ್ಣೆಗೆ 4 ಚಮಚ ಕಡಲೆ ಹಿಟ್ಟು, 1 ಚಮಚ ಜೇನು ಸೇರಿಸಿ ಕಲಸಬೇಕು. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 20 ನಿಮಿಷದ ನಂತರ ತೊಳೆಯಬೇಕು. ತಿಂಗಳಿಗೆ ಎರಡು ಬಾರಿ ಹೀಗೆ ಮಾಡಿದರೆ ಸಾಕು ತ್ವಚೆ ಮೃದುವಾಗಿ ಆಕರ್ಷಕವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read