ಸ್ಕೇಟಿಂಗ್​ನಲ್ಲಿ ಸಾಹಸ ಮಾಡಲು ಹೋಗಿ ಬೈಕ್ ಸವಾರನ ಪ್ರಾಣಕ್ಕೇ ಕುತ್ತು ತಂದ ಆಟಗಾರ

ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳನ್ನು ಅನುಸರಿಸುವ ಬಗ್ಗೆ ಸಾಕಷ್ಟು ಹೇಳಲಾಗಿದೆ ಮತ್ತು ತಿಳಿಸಲಾಗುತ್ತದೆ. ಇದರ ಹೊರತಾಗಿಯೂ ಕೆಲವರು ಹೆಚ್ಚು ಹೆಚ್ಚು ಲೈಕ್ಸ್​ ಪಡೆಯಲು ಹುಚ್ಚು ಸಾಹಸಕ್ಕೆ ಮುಂದಾಗಿ ತಮ್ಮ ಜೀವವನ್ನು ಮಾತ್ರವಲ್ಲದೇ ಅಮಾಯಕರ ಜೀವವನ್ನೂ ತೆಗೆಯುತ್ತಿರುವ ನಿದರ್ಶನಗಳಿವೆ.
ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ.

ರಸ್ತೆಯ ಮೇಲೆ ಸ್ಕೇಟ್‌ಬೋರ್ಡ್ ಆಡುತ್ತಿರುವ ಯುವಕನ ವಿಡಿಯೋ ಇದಾಗಿದೆ. ಈತ ಅತಿ ವೇಗದಲ್ಲಿ ಸ್ಕೇಟಿಂಗ್​ನಲ್ಲಿ ಸವಾರಿ ಮಾಡುತ್ತಿರುವುದನ್ನು ನೋಡಬಹುದು. ಆರಂಭದಲ್ಲಿ ಈತ ಎದುರಿಗೆ ಬರುವ ವಾಹನ, ಬೈಕ್​ಗಳನ್ನು ತಪ್ಪಿಸಿಕೊಂಡು ರಸ್ತೆಯ ಮೇಲೆ ವೇಗದಲ್ಲಿ ಸವಾರಿ ಮಾಡಲು ಯಶಸ್ವಿಯಾಗುತ್ತಾನೆ. ಮೊದಲಿಗೆ ಎದುರಿಗಿನಿಂದ ಬಂದ ಟ್ರಕ್, ನಂತರ ಇನ್ನೊಂದು ಬೈಕ್​ ಎಲ್ಲವನ್ನೂ ತಪ್ಪಿಸಿಕೊಂಡು ಹೋಗುತ್ತಾನೆ.

ಇದಾದ ಬಳಿಕ ಇನ್ನೊಂದು ಬೈಕ್​ ಸವಾರ ತನ್ನ ಬೈಕ್​ನಲ್ಲಿ ಭಾರಿ ಸಾಮಾನು ಹೊತ್ತು ಬರುತ್ತಿರುವಾಗ ಈ ಸ್ಕೇಟರ್​ ಎದುರಿಗಿರುವ ಬೈಕ್ಗು ಗುದ್ದುತ್ತಾನೆ. ನಿಯಂತ್ರಣ ಕಳೆದುಕೊಂಡು ಬೈಕ್​ ಸವಾರ ಬೀಳುತ್ತಾನೆ. ಸ್ಕೇಟಿಂಗ್‌ಗಾಗಿ ತಪ್ಪು ರಸ್ತೆಯನ್ನು ಆರಿಸಿಕೊಂಡದ್ದೂ ಅಲ್ಲದೇ ಬೈಕ್​ ಸವಾರನ ಪ್ರಾಣಕ್ಕೆ ಸಂಚಕಾರ ತಂದಿದ್ದಾನೆ. ವಿಡಿಯೋ ನೋಡಿದರೆ ಇಬ್ಬರಿಗೂ ಗಂಭೀರ ಗಾಯಗಳಾಗಿವೆ ಎಂಬುದು ತೋರುತ್ತದೆ. ಆದರೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ.

https://twitter.com/Fun_Entertement/status/1632599285631000578?ref_src=twsrc%5Etfw%7Ctwcamp%5Etweetembed%7Ctwterm%5E1632599285631000578%7Ctwgr%5E171904f28f382d2034093b4378fd8c983df12b3b%7Ctwcon%5Es1_&ref_url=https%3A%2F%2Fwww.india.com%2Fviral%2Fviral-skateboarder-creates-mess-on-road-takes-biker-down-shocking-video-watch-5989379%2F

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read