ಟಾಲಿವುಡ್ ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಕನ್ನಡದ ನಟಿ ಶೀಲೀಲಾ ಅಭಿನಯಿಸಿರುವ ‘ಸ್ಕಂದ’ ಚಿತ್ರ ಮುಂದಿನ ತಿಂಗಳು ಸೆಪ್ಟೆಂಬರ್ 15 ರಂದು ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಾಗೂ ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ತೆರೆ ಕಾಣಲಿದೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದೆ.
ಬೋಯಪತಿ ಶ್ರೀನು ನಿರ್ದೇಶಿಸಿರುವ ಆಕ್ಷನ್, ರೋಮ್ಯಾನ್ಸ್, ಎಂಟರ್ಟೈನರ್ ಕಥಾಂದರ ಹೊಂದಿರುವ ಈ ಚಿತ್ರದಲ್ಲಿ ರಾಮ್ ಪೋತಿನೇನಿ ಮತ್ತು ಶೀಲೀಲಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಶ್ರೀನಿವಾಸ ಸಿಲ್ವರ್ ಸ್ಕ್ರೀನ್ ಮತ್ತು ಜಿ ಸ್ಟುಡಿಯೋಸ್ ಬ್ಯಾನರ್ ನಡಿ ಶ್ರೀನಿವಾಸ ಚಿಟ್ಟೂರಿ ಹಾಗೂ ಪವನ್ ಕುಮಾರ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ತಮ್ಮನ್ ಎಸ್ ಸಂಗೀತ ಸಂಯೋಜನೆ ಮಾಡಿದ್ದಾರೆ.
It’s a wrap for our #Skanda shoot with a song! 🎬❤️🔥
Get ready for the massive energetic combo massive feast on September 15th🔥🔥 #SkandaOnSep15 #RAmPOthineni pic.twitter.com/62VeDnOklC
— Skanda Movie Official (@SkandaOffl) August 9, 2023