ಮಂಗಳೂರು: ಧರ್ಮಸ್ಥಳದ ವಿವಿಧೆಡೆ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಅಧಿಕಾರಿಗಳು ಇಬ್ಬರು ಆಂಬುಲೆನ್ಸ್ ಚಾಲಕರ ವಿಚಾರಣೆ ನಡೆಸಿದ್ದಾರೆ.
ಕಳೆದ 23 ವರ್ಷಗಳಿಮ್ದ ಶವ ಸಾಗಾಟ ಮಾಡುತ್ತಿದ್ದ ಇಬ್ಬರನ್ನೂ ವಿಚಾರಣೆ ನಡೆಸಿದ ಎಸ್ ಐಟಿ ಮಹತ್ವದ ಮಾಹಿತಿ ಸಂಗ್ರಹಿಸಿ ಹೇಳಿಕೆ ದಾಖಲಿಸಿಕೊಂಡಿದೆ.
ಆರೋಪಿ ಚಿನ್ನಯ್ಯ ಹೇಳಿಕೆ ಬಳಿಕ ಬೆಳ್ತಂಗಡಿಯ ಇಬ್ಬರು ಆಂಬುಲೆನ್ಸ್ ಚಾಲಕರನ್ನು ಎಸ್ ಐಟಿ ವಿಚಾರಣೆ ನಡೆಸಿದೆ. ಬೆಳ್ತಂಗಡಿಯ ಜಲಿಲ್ ಬಾಬಾ ಹಾಗೂ ಹಮೀದ್ ಯುಡಿಆರ್ ಎಂಬುವವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯ ಪೊಲೀಸರ ನಿರ್ದೇಶನದಂತೆ ಶವ ಸಾಗಾಟ ಮಾಡಲಾಗಿದೆ ಎಂದು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.