ಹಾವೇರಿ: ಪೋಷಕರು ಬೈದರು ಎಂದು ನೊಂದು ಹಾವೇರಿಯಿಂದ ಮನೆ ಬಿಟ್ಟು ಹೋಗಿದ್ದ ಅಕ್ಕ-ತಂಗಿ ಇಬ್ಬರೂ ಪುಣೆಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.
ಹಾವೇರಿ ಶಾಲೆಯಿಂದ ನಾಪತ್ತೆಯಾಗಿದ್ದ ಇಬ್ಬರು ಸಹೋದರಿಯರು ಪುಣೆಯಲ್ಲಿ ಸಿಕ್ಕಿದ್ದಾರೆ. ಹಾವೇರಿಯ ಅಬ್ದುಲ್ ಖಾದರ್ ಲೋಹಾರ್ ಅವರ ಪುತ್ರಿಯರು ಹಾವೇರಿಯ ಲಯನ್ಸ್ ಆಂಗ್ಲ ಶಾಲೆಯಲ್ಲಿ ಓದುತ್ತಿದ್ದರು. ಶನಿವಾರ ಶಾಲೆ ಮುಗಿದ ಬಳಿಕ ನಾಪತ್ತೆಯಾಗಿದ್ದಾರೆ. ಉಮರ್ ಖೈರ್ ಫಾತಿಮಾ ಹಾಗೂ ಉಮ್ಮಿ ಹಬಿಬಾ ಎಂಬ ಇಬ್ಬರು ಸಹೋದರಿಯರು ಶಾಲೆಯಿಂದ ಮನೆಗೆ ವಾಪಸ್ ಆಗಿರಲಿಲ್ಲ.
ಆತಂಕಕ್ಕೀಡಾದ ಪೋಷಕರು ಹಾವೇರಿ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದರು. ಅಕ್ಕ-ತಂಗಿ ನಾಪತ್ತೆಯಾಗಿರುವ ದೂರು ದಾಖಲಾಗಿತ್ತು. ಪೊಲೀಸರು ಹುಡುಕಾಟ ನಡೆಸಿದ್ದಾಗ, ಅಕ್ಕ-ತಂಗಿ ಇಬ್ಬರೂ ಮಹಾರಾಷ್ಟ್ರದ ಪುಣೆಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಪೋಷಕರು ಬೈದರು ಎಂಬ ಕಾರಣಕ್ಕೆ ಇಬ್ಬರೂ ಮನೆ ಬಿಟ್ಟು ಹೋಗಿದ್ದಾರೆ ಎಂದು ತಿಳಿದುಬಂದಿದೆ.