ಪ್ರೇತದ ಜೊತೆ ಗಾಯಕಿಯ ಮದುವೆ….! ಇದನ್ನು ಓದಿದ್ರೆ ಶಾಕ್​ ಆಗೋದು ಗ್ಯಾರಂಟಿ

ದೆವ್ವ, ಆತ್ಮ, ಪಿಶಾಚಿ ಇದೆಯೋ ಇಲ್ಲವೋ ಎಂಬ ಬಗ್ಗೆ ವಾದ-ಪ್ರತಿವಾದಗಳು ನಡೆಯುತ್ತಲೇ ಇರುತ್ತವೆ. ಆದರೆ ಇತ್ತೀಚೆಗೆ ಇಂಗ್ಲೆಂಡ್‌ನ ಆಕ್ಸ್ ಫರ್ಡ್‌ಶೈರ್‌ನಲ್ಲಿ ವಾಸಿಸುವ ಬ್ರೋಕಾರ್ಡ್ ಎಂಬ ಗಾಯಕಿ ಹೇಳಿರುವ ಸ್ಟೋರಿ ಕೇಳಿ ಎಲ್ಲರೂ ಸುಸ್ತಾಗಿದ್ದಾರೆ. ಏಕೆಂದರೆ ಈಕೆ ಭೂತವೊಂದನ್ನು ಪ್ರೀತಿಸುತ್ತಿರುವುದಾಗಿ ಕಳೆದ ವರ್ಷ ಹೇಳಿಕೊಂಡಿದ್ದರು. ಆಕೆ ಪ್ರೀತಿಸುತ್ತಿರುವ ಭೂತದ ಹೆಸರು ಎಡ್ವರ್ಡೊ ಎಂದಂತೆ. ಈ ಭೂತದ ಜೊತೆ ಮದುವೆಯಾಗಿರುವುದಾಗಿ ಹೇಳಿಕೊಂಡಿದ್ದಾಳೆ.

38 ವರ್ಷದ ಬ್ರೋಕಾರ್ಡ್ ವರಿಸಿರುವ ಪ್ರೇತ ವಿಕ್ಟೋರಿಯನ್ ಸೈನಿಕನ ಆತ್ಮವಂತೆ. ತಾನು ಈತನನ್ನು ತುಂಬಾ ಪ್ರೀತಿಸುತ್ತಿದ್ದು, ದೆವ್ವ ಕೂಡ ನನ್ನನ್ನು ಪ್ರೀತಿಸುತ್ತಿದ್ದಾನೆ. ನನಗೆ ಬೇಸಿಗೆ ಇಷ್ಟ. ಈತನಿಗೆ ಚಳಿಗಾಲ ಇಷ್ಟ ಎಂದು ಹೇಳಿಕೊಂಡಿರುವ ಬ್ರೋಕಾರ್ಡ್,​ ಇದಾಗಲೇ ಅವನ ಇಷ್ಟದಂತೆ ಮದುವೆಯಾಗಿದ್ದು, ಅದು ತನ್ನ ಜೊತೆ ದೈಹಿಕ ಸಂಬಂಧವನ್ನೂ ಮಾಡಿದೆ ಎಂದು ಹೇಳಿಕೊಂಡಿದ್ದಾಳೆ, ಇಬ್ಬರೂ ಹನಿಮೂನ್​ಗೆ ಹೋಗಿರುವುದನ್ನೂ ವಿವರಿಸಿದ್ದಾಳೆ.

ತಾನು ಪ್ರೇತದ ಜೊತೆ ಮಾತನಾಡುವ ಬಗ್ಗೆ ಈಕೆ ಹೇಳಿಕೊಂಡಿದ್ದಾರೆ. ಎಡ್ವರ್ಡೊ ರಹಸ್ಯ ಮಾರ್ಗಗಳನ್ನು ಬಳಸಿಕೊಂಡು ಮಹಿಳೆಗೆ ಸಂದೇಶವನ್ನು ಕಳುಹಿಸುತ್ತಾನೆ. ಸ್ನಾನ ಮಾಡುವಾಗ ಬಿಸಿನೀರಿನ ಹಬೆಯಲ್ಲಿ ಎಡ್ವರ್ಡೊ ಸಂದೇಶ ಬರೆಯುತ್ತಾನಂತೆ. ಅದಕ್ಕೆ ಮಹಿಳೆ ಅಲ್ಲಿಯೇ ಉತ್ತರ ನೀಡುತ್ತಾಳಂತೆ. ಇದಲ್ಲದೆ ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ಬೀಳಿಸುವ ಮೂಲಕ ತನ್ನ ಉಪಸ್ಥಿತಿಯನ್ನು ಆತ ತೋರಿಸುತ್ತಾನಂತೆ. ನಂತರ ಪಾತ್ರೆಗಳ ಶಬ್ದದ ಮೂಲಕವೇ ಇಬ್ಬರ ಮಾತುಕತೆ ನಡೆಯುತ್ತದೆಯಂತೆ ಎಂದು ಹೇಳಿಕೊಂಡಿದ್ದಾಳೆ. ನನ್ನ ದಿಂಬಿನ ಬಳಿ ಉಂಗುರವನ್ನು ಇರಿಸುವ ಮೂಲಕ ದೆವ್ವ ಪ್ರೀತಿಯನ್ನು ಪ್ರಸ್ತಾಪಿಸಿದ್ದ. ನಂತರ ಮದುವೆಯಾಗಿರುವುದಾಗಿ ಹೇಳಿದ್ದಾಳೆ ಗಾಯಕಿ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read