ಮೂರನೇ ಮಗುವನ್ನ ಸ್ವಾಗತಿಸಿದ ಗಾಯಕ ದಂಪತಿ

Atif Aslam and wife welcome their first daughter | The Daily Starಪಾಕಿಸ್ತಾನದ ಸ್ಟಾರ್ ದಂಪತಿಗಳಾದ ಗಾಯಕ ಅತಿಫ್ ಅಸ್ಲಾಂ ಮತ್ತು ಗಾಯಕಿ ಸಾರಾ ಭರ್ವಾನಾ ಅವರು ತಮ್ಮ ಮೂರನೇ ಮಗುವನ್ನ ಸ್ವಾಗತಿಸಿದ್ದಾರೆ. ದಂಪತಿಗೆ ಹೆಣ್ಣು ಮಗುವಾಗಿದ್ದು ಮಗುವಿಗೆ ಹಲೀಮಾ ಎಂದು ಹೆಸರಿಟ್ಟಿದ್ದಾರೆ.

ಇನ್ಸ್ಟಾಗ್ರಾಮ್ ಮೂಲಕ ಗಾಯಕ ದಂಪತಿ ಈ ಘೋಷಣೆ ಮಾಡಿದ್ದಾರೆ. ಮಗುವಿನ ಚಿತ್ರವನ್ನು ಪೋಸ್ಟ್ ಮಾಡಿದ್ದು,

“ಅಂತಿಮವಾಗಿ ಕಾಯುವಿಕೆ ಮುಗಿದಿದೆ. ನನ್ನ ಹೃದಯದ ಹೊಸ ರಾಣಿ ಬಂದಿದ್ದಾರೆ. ಮಗು ಮತ್ತು ಸಾರಾ ಇಬ್ಬರೂ ಚೆನ್ನಾಗಿದ್ದಾರೆ. ದಯವಿಟ್ಟು ನಿಮ್ಮ ಪ್ರಾರ್ಥನೆಯಲ್ಲಿ ನಮ್ಮನ್ನು ನೆನಪಿಸಿಕೊಳ್ಳಿ. ಹಲೀಮಾ ಆತಿಫ್ ಅಸ್ಲಾಮ್ ಅವರಿಂದ ರಂಜಾನ್ ಮುಬಾರಕ್.” ಎಂದಿದ್ದಾರೆ.

ಅತೀಫ್ ಅಸ್ಲಾಂ ಮತ್ತು ಪತ್ನಿ ಸಾರಾ ಈಗಾಗಲೇ ಅಬ್ದುಲ್ ಅಹದ್ ಮತ್ತು ಆರ್ಯನ್ ಅಸ್ಲಾಂ ಎಂಬ ಇಬ್ಬರು ಗಂಡು ಮಕ್ಕಳಿಗೆ ಪೋಷಕರಾಗಿದ್ದಾರೆ.

ಮಾರ್ಚ್ 2013 ರಲ್ಲಿ ಲಾಹೋರ್‌ನಲ್ಲಿ ನಡೆದ ಸರಳ ವಿವಾಹದಲ್ಲಿ ಅತೀಫ್ ಅಸ್ಲಾಂ ತಮ್ಮ ದೀರ್ಘಕಾಲದ ಗೆಳತಿ ಸಾರಾ ಭರ್ವಾನಾ ಅವರನ್ನು ವಿವಾಹವಾದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read