ಮೇದಿನಿನಗರ : ಜಾರ್ಖಂಡ್ನ ಪಲಾಮು ಜಿಲ್ಲೆಯಲ್ಲಿ 22 ವರ್ಷದ ಮಹಿಳೆಯೊಬ್ಬರನ್ನ ಆಕೆಯ ಪತಿ ಹೊಡೆದು ಕೊಂದಿದ್ದಾನೆ. ಪತ್ನಿ ಮದ್ಯ ಸೇವಿಸಿದ್ದಕ್ಕೆ ಗಲಾಟೆ ನಡೆದು ಪತಿಯೇ ತನ್ನ ಪತ್ನಿಯನ್ನ ಹತ್ಯೆ ಮಾಡಿದ್ದಾನೆ.
ಸೋಮವಾರ ರಾತ್ರಿ ರಾಮಗಢ ಪೊಲೀಸ್ ಠಾಣೆ ಪ್ರದೇಶದ ದಾತಮ್ ಬಾಡಿ ಝಾರಿಯಾದಲ್ಲಿ ಈ ಘಟನೆ ನಡೆದಿದ್ದು, ಪತಿ ಉಪೇಂದ್ರ ಪರ್ಹಿಯಾ (25) ಅವರನ್ನು ಮಂಗಳವಾರ ಮಧ್ಯಾಹ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ಶಿಲ್ಪಿ ದೇವಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೇದಿನಿರೈ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಉಪೇಂದ್ರ ತನ್ನ ಮನೆಯಲ್ಲಿ ಕುಡಿದ ಮತ್ತಿನಲ್ಲಿದ್ದ. ಶಿಲ್ಪಿ ಕೂಡ ಕುಡಿದು ಮನೆಗೆ ಬಂದಾಗ ಇಬ್ಬರ ನಡುವೆ ಜಗಳ ಆಯಿತು. ಇದರಿಂದ ಕೋಪಗೊಂಡ ಉಪೇಂದ್ರ, ಕುಡಿದು ಮನೆಗೆ ಹಿಂದಿರುಗಿದ್ದರ ಬಗ್ಗೆ ಆಕೆಯನ್ನು ಪ್ರಶ್ನಿಸಿದ್ದು, ಇದು ಜಗಳಕ್ಕೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.ಅವಳ ಮೇಲೆ ಹಲ್ಲೆ ಮಾಡಿದ ಪತಿ ನಂತರ ಎತ್ತಿ ಆಕೆಯನ್ನ ನೆಲಕ್ಕೆ ಬಡಿದಿದ್ದಾನೆ ಎನ್ನಲಾಗಿದೆ.
