BIG NEWS : ಖಜಾನೆ-2 ರಲ್ಲಿ ಸರಳೀಕೃತ, ಹೊಸ ಕಾರ್ಯಚಟುವಟಿಕೆಗಳ ಸೇರ್ಪಡೆ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

ಬೆಂಗಳೂರು : ಖಜಾನೆ-2 ರಲ್ಲಿ ಸರಳೀಕೃತ, ಹೊಸ ಕಾರ್ಯಚಟುವಟಿಕೆಗಳ ಸೇರ್ಪಡೆಗೊಳಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಸರ್ಕಾರದ ಐಎಫ್ಎಂಎಸ್ ಯೋಜನೆಯಾದ ಖಜಾನೆ-2ರಲ್ಲಿ, ಪ್ರಸ್ತುತ ಇರುವ ಕೆಲವೊಂದು ಕಾರ್ಯಚಟುವಟಿಕೆಗಳನ್ನು ಸರಳೀಕೃತಗೊಳಿಸಿದ್ದು ಹಾಗೂ ಕೆಲವೊಂದು ಹೊಸ ಕಾರ್ಯಚಟುವಟಿಕೆಗಳನ್ನು ಸೇರ್ಪಡೆ ಮಾಡಿದ್ದು, ಸದರಿ ಪ್ರಮುಖ ಬದಲಾವಣೆಗಳ ವಿವರಗಳು ಈ ಕೆಳಕಂಡಂತಿವೆ.

ರಾಜ್ಯವಲಯದ ವೇತನ ಬಿಲ್ಲುಗಳ ಮುದ್ರಿತ ಭೌತಿಕ ಬಿಲ್ಲುಗಳನ್ನು ಸಲ್ಲಿಸುವುದನ್ನು ನಿರ್ಬಂಧಿಸುವ ಕುರಿತು.
ಪ್ರಸ್ತುತ ಚಾಲ್ತಿಯಲ್ಲಿರುವ ಪ್ರಕ್ರಿಯೆ: ವೇತನ ಭತ್ಯೆಗಳಿಗೆ ಸಂಭಂದಿಸಿದ ಬಿಲ್ಲು ಮತ್ತು ವೇತನಗಳಲ್ಲಿನ ಕಡಿತ. ವಸೂಲಾತಿಗಳ ಸಂಬಂಧ ಷೆಡ್ಯೂಲ್ ಗಳನ್ನು |ಭೌತಿಕವಾಗಿ ಸಲ್ಲಿಸಲಾಗುತ್ತಿತ್ತು.

ಸರಳೀಕೃತ ಪ್ರಕ್ರಿಯೆ: ವೋಚರುಗಳ ಡಿಜಿಟಲೀಕರಣದ ಅಂಗವಾಗಿ, ವೇತನ ಹಾಗೂ ವೇತನ ಭತ್ಯೆಗಳಿಗೆ ಸಂಬಂದಿಸಿದ ಬಿಲ್ಲು ಮತ್ತು ವೇತನಗಳಲ್ಲಿನ ಕಡಿತ, ವಸೂಲಾತಿಗಳ ಸಂಬಂಧ ಭೌತಿಕ ಷೆಡ್ಯೂಲ್ ಗಳ ಬದಲು ಆನ್ಲೈನ್ ನಲ್ಲಿ ಅಂಗೀಕರಿಸಲು ಹಾಗೂ ಡಿಡಿಓರವರು ಭೌತಿಕವಾಗಿ ಮುದ್ರಿಸಿ ಸಲ್ಲಿಸದೆ ಡಿಎಸ್ಸಿ(DSC) ಮೂಲಕ ಧೃಢೀಕರಿಸಿ ಖಜಾನೆಗಳಿಗೆ ಆನ್ಲೈನ್ ಮೂಲಕ ಮಾತ್ರ ಸಲ್ಲಿಸಲು ಸರ್ಕಾರವು ಆದೇಶಿಸಿದೆ.

ii) ಜಿಲ್ಲಾವಲಯದ ವೇತನ ಬಿಲ್ಲುಗಳ ಮುದ್ರಿತ ಭೌತಿಕ ಬಿಲ್ಲುಗಳನ್ನು ಸಲ್ಲಿಸುವುದನ್ನು ನಿರ್ಬಂಧಿಸುವ ಕುರಿತು.
ಪ್ರಸ್ತುತ, ಚಾಲ್ತಿಯಲ್ಲಿರುವ ಪ್ರಕ್ರಿಯೆ: ಜಿಲ್ಲಾ ವಲಯದ ವೇತನ ಭತ್ಯೆಗಳಿಗೆ ಸಂಬಂಧಿಸಿದ ಬಿಲ್ಲು ಮತ್ತು ವೇತನಗಳಲ್ಲಿನ ಕಡಿತ ವಸೂಲಾತಿಗಳ ಸಂಬಂಧ ಷೆಡ್ಯೂಲ್ಗಳನ್ನು ಭೌತಿಕವಾಗಿಯು ಸಲ್ಲಿಸಲಾಗುತ್ತಿತ್ತು.
ಸರಳೀಕೃತ ಪ್ರಕ್ರಿಯೆ: ವೋಚರ್ಗಳ ಡಿಜಟಲೀಕರಣದ ಅಂಗವಾಗಿ ದಿನಾಂಕ:01.05.2025 ರಿಂದ ಜಾರಿಗೆ ಬರುವಂತೆ, ಜಿಲ್ಲಾವಲಯದ (ಜಿ.ಪಂ. ಹಾಗೂ ತಾ.ಪಂ.) ಡಿಡಿಓ ರವರು, ಜಿಲ್ಲಾ ವಲಯದ ವೇತನ ಬಿಲ್ಲುಗಳು ಹಾಗೂ ಸಂಬಂಧಿಸಿದ ವೇತನಗಳಲ್ಲಿನ ಕಡಿತ, ವಸೂಲಾತಿಗಳ ಸಂಬಂಧ ಭೌತಿಕ ಷೆಡ್ಯೂಲ್ಗಳ ಬದಲು ಆನ್ಲೈನ್ ನಲ್ಲಿ ಅಂಗೀಕರಿಸಲು ಹಾಗೂ ಇದಕ್ಕೆ ಸಂಬಂಧಿಸಿದ ಬಿಲ್ಲುಗಳನ್ನು ಡಿಡಿಓರವರು ಡಿಎಸ್ಸಿ(DSC) ಮೂಲಕ ದೃಢೀಕರಿಸಿ ಖಜಾನೆಗಳಿಗೆ ಆನ್ ಲೈನ್ ಮೂಲಕ ಸಲ್ಲಿಸುವಂತೆ ಹಾಗೂ ಭೌತಿಕವಾಗಿ ಮುದ್ರಿಸಿ ಸಲ್ಲಿಸದಿರಲು ಆದೇಶಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read