ಬೆಳ್ಳಿ ಉಂಗುರ ಧರಿಸುವುದರಿಂದ ಕಡಿಮೆಯಾಗುತ್ತೆ ಗ್ರಹ ದೋಷ ಸಮಸ್ಯೆ

ಜ್ಯೋತಿಷ್ಯದಲ್ಲಿ ಕೆಲ ದೊಡ್ಡ ಸಮಸ್ಯೆಗೆ ಸಣ್ಣ ಮತ್ತು ಸುಲಭ ಉಪಾಯವಿದೆ. ಗ್ರಹದೋಷದ ಸಮಸ್ಯೆಯನ್ನು ಇದು ಕಡಿಮೆ ಮಾಡುತ್ತದೆ. ಯಾವುದೇ ಜೋಡಣೆಯಿಲ್ಲದ ಬೆಳ್ಳಿ ಉಂಗುರ ಒಳ್ಳೆ ಉಪಾಯ. ಬೆರಳಿನ ಗಾತ್ರಕ್ಕೆ ಸರಿಯಾಗಿ ಸುಮಾರು 1 ಸಾವಿರ ರೂಪಾಯಿಗೆ ಬೆಳ್ಳಿ ಉಂಗುರ ಸಿಗುತ್ತದೆ.

ಬೆಳ್ಳಿ ಉಂಗುರ ಶುಕ್ರ ಗ್ರಹವನ್ನು ಬಲಪಡಿಸುತ್ತದೆ. ಶುಕ್ರ ತನ್ನ ಸ್ನೇಹಿತ ಬುಧ ಗ್ರಹದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಾನೆ. ಶುಕ್ರ ಮತ್ತು ಬುಧ ಒಟ್ಟಿಗೆ ಸೇರಿ ಜೀವನದಲ್ಲಿ ಸಂತೋಷ, ಸಮೃದ್ಧಿ, ಸೌಂದರ್ಯ ಮತ್ತು ಬುದ್ಧಿವಂತಿಕೆಯನ್ನು ನೀಡುತ್ತಾರೆ. ವೃತ್ತಿಜೀವನದಲ್ಲಿ ಬರುವ ಅಡೆತಡೆಗಳನ್ನು ತೆಗೆದುಹಾಕುವ ಮೂಲಕ ಯಶಸ್ಸು ಲಭಿಸುತ್ತದೆ.

ಈ ಬೆಳ್ಳಿ ಉಂಗುರ, ಸೂರ್ಯ ಮತ್ತು ಶನಿಯ ಸ್ಥಾನವನ್ನು ಬಲಪಡಿಸುತ್ತದೆ. ಅದೃಷ್ಟ ಹೆಚ್ಚಾಗುತ್ತದೆ. ನಿಂತ ಕೆಲಸ ಪುನಃ ಪ್ರಾರಂಭವಾಗುತ್ತದೆ. ಹುಡುಗಿಯರು ಎಡಗೈ ಬೆರಳಿಗೆ ಹಾಗೂ ಹುಡುಗು ಬಲಗೈ ಬೆರಳಿಗೆ ಧರಿಸಬೇಕು. ವಿವಾಹಿತರು ಬೆಳ್ಳಿ ಉಂಗುರ ಧರಿಸುವುದ್ರಿಂದ ವೈವಾಹಿಕ ಜೀವನದಲ್ಲಿ ಸಂತೋಷ ನೆಲೆಸುತ್ತದೆ. ರಾಹು ದೋಷ ಕಡಿಮೆಯಾಗುತ್ತದೆ. ಮನಸ್ಸು ಶಾಂತವಾಗಿರುತ್ತದೆ. ಕೋಪ ಕಡಿಮೆಯಾಗುತ್ತದೆ.

ಉಂಗುರವನ್ನು ಖರೀದಿಸುವಾಗ ಜೋಡಣೆ ಇರದಂತೆ ನೋಡಿಕೊಳ್ಳಿ. ಜಾತಕದಲ್ಲಿ ಚಂದ್ರ, ಶುಕ್ರ, ಶನಿ, ಸೂರ್ಯ, ರಾಹು ಮತ್ತು ಬುಧ ದೋಷಗಳಿದ್ದಲ್ಲಿ, ಬೆಳ್ಳಿಯ ಉಂಗುರವನ್ನು ಧರಿಸುವ ಮೊದಲು ಜ್ಯೋತಿಷಿಯನ್ನು ಸಂಪರ್ಕಿಸಿ. ಸೋಮವಾರ ಉಂಗುರವನ್ನು ಧರಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read