ನವದೆಹಲಿ: ಅಮೆರಿಕದ ಸುಂಕ ಬೆದರಿಕೆ ಅನಿಶ್ಚಿತತೆ ನಡುವೆ ಅಮೆರಿಕನ್ ಡಾಲರ್ ದುರ್ಬಲಗೊಂಡ ನಂತರ ಹೂಡಿಕೆದಾರರು ಸುರಕ್ಷಿತ ಸ್ವತ್ತುಗಳತ್ತ ಧಾವಿಸಿದ ಕಾರಣ ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಬೆಳ್ಳಿ ಬೆಲೆ 5,000 ರೂಪಾಯಿ ಏರಿಕೆಯಾಗಿ ಕೆಜಿಗೆ 1,15,000 ರೂಪಾಯಿ ತಲುಪಿದೆ.
ಅಖಿಲ ಭಾರತ ಸರಾಫಾ ಅಸೋಸಿಯೇಷನ್ ಪ್ರಕಾರ, ಶನಿವಾರ ಬೆಳ್ಳಿ ಬೆಲೆ 4,500 ರೂಪಾಯಿ ಏರಿಕೆಯಾಗಿ ಪ್ರತಿ ಕಿಲೋಗ್ರಾಂಗೆ(ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ) 1,10,000 ರೂಪಾಯಿಗಳ ಜೀವಮಾನದ ಗರಿಷ್ಠ ಮಟ್ಟವನ್ನು ತಲುಪಿದೆ.
ಸಂಘದ ಪ್ರಕಾರ, ಶೇಕಡಾ 99.9 ಮತ್ತು ಶೇಕಡಾ 99.5 ರಷ್ಟು ಶುದ್ಧತೆಯ ಚಿನ್ನವು ತಲಾ 200 ರೂಪಾಯಿ ಏರಿಕೆಯಾಗಿ 10 ಗ್ರಾಂಗೆ (ಎಲ್ಲಾ ತೆರಿಗೆಗಳನ್ನು ಒಳಗೊಂಡಂತೆ) ಕ್ರಮವಾಗಿ 99,570 ಮತ್ತು 99,000 ರೂಪಾಯಿಗಳಿಗೆ ತಲುಪಿದೆ.
ಬೆಳ್ಳಿ ಬೆಲೆಗಳು ಗಗನಕ್ಕೇರುತ್ತಿವೆ, ದೇಶೀಯ ಮಾರುಕಟ್ಟೆಯಲ್ಲಿ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿವೆ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 14 ವರ್ಷಗಳಲ್ಲಿ ಅತ್ಯುನ್ನತ ಮಟ್ಟವನ್ನು ತಲುಪಿವೆ. ಚಿನ್ನಕ್ಕೆ ಪರ್ಯಾಯಗಳ ಕಡೆಗೆ ಹೂಡಿಕೆದಾರರ ಆಸಕ್ತಿಯಲ್ಲಿನ ಬದಲಾವಣೆಯಿಂದ ಈ ಏರಿಕೆ ಉಂಟಾಗಿದೆ ಎಂದು HDFC ಸೆಕ್ಯುರಿಟೀಸ್ನ ಸರಕುಗಳ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಹೇಳಿದರು.