ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರ್ ಅವರು ನಿರ್ಮಿಸಿ, ರಿಷಬ್ ಶೆಟ್ಟಿ (Rishabh Shetty) ನಟಿಸಿ, ನಿರ್ದೇಶಿಸಿದ ಕಾಂತಾರ ಸಿನಿಮಾ ದುಬೈನಲ್ಲಿ ನಡೆದ ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಬರೋಬ್ಬರಿ 10 ಅವಾರ್ಡ್ ಗಳನ್ನು ಗೆದ್ದುಕೊಂಡಿದೆ.
ಪ್ರಸ್ತುತ ಸೈಮಾ ಅವಾರ್ಡ್ಸ್ ನಲ್ಲಿ ಅತ್ಯುತ್ತಮ ನಟನೆಗೆ, ನಿರ್ದೇಶನಕ್ಕೆ ಹಾಗು ಪಾಥ್ ಬ್ರೇಕಿಂಗ್ ಸ್ಟೋರಿಗೆ ಸ್ಪೆಷಲ್ ಅಪ್ರಿಸಿಯೇಷನ್ ಅವಾರ್ಡ್ ಸೇರಿ ಒಟ್ಟು 3 ಅವಾರ್ಡ್ ಗಳು ರಿಷಬ್ ಶೆಟ್ಟಿಯವರಿಗೆ ದೊರಕಿದೆ.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿರುವ ರಿಷಬ್ ಶೆಟ್ಟಿ, ಜನರ ಮನ್ನಣೆಯಿಂದ ಸಿಕ್ಕ ಪ್ರೀತಿಯೇ, ಕಾಂತಾರದ ಯಶಸ್ಸಿಗೆ ಕಾರಣ, ಸೈಮ ಅವಾರ್ಡ್ಸ್ ನಲ್ಲಿ ಅತ್ಯುತ್ತಮ ನಿರ್ದೇಶನ, ಪಾಥ್ ಬ್ರೇಕಿಂಗ್ ಸ್ಟೋರಿ ಹಾಗು ಅತ್ಯುತ್ತಮ ನಟ,ನಟಿ, ಖಳನಟ, ಹಾಸ್ಯನಟ, ಸಂಗೀತ ನಿರ್ದೇಶಕ, ಗಾಯಕ, ಸಾಹಿತಿ ಪ್ರಶಸ್ತಿ ಗಳನ್ನು ಪಡೆದಿದೆ. ಮನ ತುಂಬಿ ಬಂದಿದೆ, ಜವಾಬ್ದಾರಿ ಹೆಚ್ಚಿಸಿದೆ. ನಿಮ್ಮ ಪ್ರೀತಿ, ಆಶೀರ್ವಾದ ಹೀಗೇ ಇರಲಿ. ಈ ಎಲ್ಲಾ ಯಶಸ್ಸನ್ನು ದೈವ ನರ್ತಕರು, ಅಪ್ಪು ಸರ್ ಹಾಗೂ ಕನ್ನಡಿಗರಿಗೆ ಸಮರ್ಪಣೆ ಎಂದು ಬರೆದುಕೊಂಡಿದ್ದಾರೆ.
ಕಾಂತಾರಕ್ಕೆ ಸಿಕ್ಕ ಜನಮನ್ನಣೆ ಈಗ ಪ್ರಶಸ್ತಿಗಳ ರೂಪ ಪಡೆದಿದೆ. ಈ ವರ್ಷದ ಸೈಮಾದಲ್ಲಿ ಅತ್ಯುತ್ತಮ ನಿರ್ದೇಶನ, ನಟ, ನಟಿ, ಸಂಗೀತ ಹೀಗೆ ಒಟ್ಟು ಹತ್ತು ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ. ಈ ಎಲ್ಲಾ ಯಶಸ್ಸು, ದೈವ ನರ್ತಕರು, ಅಪ್ಪು ಸರ್ ಹಾಗೂ ಕನ್ನಡಿಗರಿಗೆ ಸಮರ್ಪಣೆ. ನಿಮ್ಮ ಪ್ರೀತಿ, ಆಶೀರ್ವಾದ ಹೀಗೇ ಇರಲಿ.#SIIMA2023 #KANTARA… pic.twitter.com/0YHJWSpFha
— Rishab Shetty (@shetty_rishab) September 19, 2023